ದೇಶಪ್ರಮುಖ ಸುದ್ದಿವಿದೇಶ

ಜಾಗತಿಕ ತಾಪಮಾನ ಪ್ಯಾರಿಸ್ ಶೃಂಗಸಭೆ : ಟ್ರಂಪ್‍ಗೆ ಆಹ್ವಾನವಿಲ್ಲ!

ಪ್ಯಾರಿಸ್, ಪ್ರಮುಖ ಸುದ್ದಿ (ನ.8): ಜಾಗತಿಕ ತಾಪಮಾನ ಏರಿಕೆ ತಡೆ ಕುರಿತಂತೆ ಮುಂದಿನ ತಿಂಗಳು ಪ್ಯಾರಿಸ್‍ನಲ್ಲಿ ನಡೆಯಲಿರುವ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿಲ್ಲ ಎಂದು ಫ್ರಾನ್ಸ್ ತಿಳಿಸಿದೆ.

ಈ ಕುರಿತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾರ್ಕೋನ್ ಅವರ ಕ್ಯಾಬಿನೆಟ್‍ ವ್ಯವಹಾರಗಳ ಅಧಿಕಾರಿರೊಬ್ಬರು ಮಾತನಾಡಿದ್ದು, ತಾಪಮಾನ ಶೃಂಗಸಭೆಗೆ ಟ್ರಂಪ್‍ ಅವರನ್ನು ಆಹ್ವಾನಿಸದಿರಲು ತಾತ್ಕಾಲಿಕ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ರಂಪ್‍ ರಾಜತಾಂತ್ರಿಕ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಪ್ಯಾರಿಸ್ ಒಪ್ಪಂದಕ್ಕೆ ಬದ್ಧತೆ ತೋರುತ್ತಿರುವ ರಾಷ್ಟ್ರಗಳನ್ನು ಮಾತ್ರ ಶೃಂಗಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಟ್ರಂಪ್ ಲಾಗ !

ಪ್ಯಾರಿಸ್ ಒಪ್ಪಂದದ ಸಮಯದಲ್ಲಿ ಅಮೆರಿಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಒಬಾಮಾ ಆಡಳಿತವು ಒಪ್ಪಂದಕ್ಕೆ ಸಹಿ ಮಾಡಿ ಬದ್ಧತೆ ತೋರಿತ್ತು. ಆದರೆ ಟ್ರಂಪ್‍ ಆಡಳಿತ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಸರ್ಕಾರವು ವಿಶ್ವಸಂಸ್ಥೆಗೆ ಪತ್ರವೊಂದನ್ನು ನೀಡಿ ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಸಹಮತ ಇಲ್ಲ ಎಂದು ತಿಳಿಸಿದೆ ಎನ್ನಲಾಗಿದೆ.

ಈ ಕುರಿತು ಅಧ್ಯಕ್ಷ ಟ್ರಂಪ್ ಅವರೂ ಹೇಳಿಕೆ ನೀಡಿ, ಪ್ಯಾರಿಸ್ ಒಪ್ಪಂದದಿಂದ ಅಮೆರಿಕಕ್ಕೆ ಹೆಚ್ಚಿನ ನಷ್ಟವಾಗಲಿದೆ. ಆದ್ದರಿಂದ ನಾವು ಈ ಒಪ್ಪಂದವನ್ನು ಪಾಲಿಸುವ ಮನಸ್ಸಿಲ್ಲ, ಒಪ್ಪಂದಿಂದ ಆಚೆ ಬರಲು ನಮಗೆ ಆಯ್ಕೆ ಇದೆ ಎಂದು ಹೇಳಿದ್ದರು. ಆದರೆ ಒಪ್ಪಂದದ ಅಂಶಗಳನ್ನು ನ.4 2020 ರ ವರೆಗೆ ಅಮೆರಿಕ ಪಾಲಿಸಲೇಬೇಕಿದ್ದು, ಟ್ರಂಪ್ ಆಡಳಿತ ಭವಿಷ್ಯದಲ್ಲಿ ಮನಸು ಬದಲಾಯಿಸುವುದೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಮುಂಬರುವ ಡಿಸೆಂಬರ್ 12ರಂದು ನಡೆಯಲಿರುವ ಪ್ಯಾರಿಸ್ ತಾಪಮಾನ ಶೃಂಗಸಭೆಯಲ್ಲಿ 100ಕ್ಕೂ ಹೆಚ್ಚು ದೇಶಗಳು, ಸ್ವಯಂ ಸೇವಾ ಸಂಘಟನೆಗಳು ಭಾಗವಹಿಸುತ್ತಿವೆ.

(ಎನ್‍ಬಿಎನ್‍)

Leave a Reply

comments

Related Articles

error: