ಪ್ರಮುಖ ಸುದ್ದಿಮೈಸೂರು

ಶ್ರೀಲಂಕಾ ಜೊತೆಗಿನ ಪ್ಯಾರಾ-ಒಲಂಪಿಕ್ ವಾಲಿಬಾಲ್ ಪಂದ್ಯಾವಳಿ ಅಕ್ರಮ; ಚಂದ್ರಶೇಖರ್ ವಜಾಕ್ಕೆ ಆಂತೋನಪ್ಪ ಆಗ್ರಹ

ರಾಜ್ಯ ವಿಕಲಚೇತನ ವಾಲಿಬಾಲ್ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಸಂಸ್ಥೆಯ ಅಧ‍್ಯಕ್ಷ ಚಂದ್ರಶೇಖರ್ ಅವರು ಅನ್ಯಾಯವೆಸಗಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಕರ್ನಾಟಕ ರಾಜ್ಯ ವಿಕಲಚೇತನ ವಾಲಿಬಾಲ್ ತಂಡದ ನಾಯಕ ಎಸ್. ಆಂತೋನಪ್ಪ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತಿದ್ದ ಅವರು, “ಚಂದ್ರಶೇಖರ್ ಈ ಮೊದಲು ಎಚ್ಇಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೂ ಸಹ ಅವ್ಯವಹಾರಗಳಲ್ಲಿ ತೊಡಗಿದ್ದರು. ನಂತರ ವಾಲಿಬಾಲ್ ಸಂಸ‍್ಥೆಯ ಅಧ್ಯಕ್ಷರಾಗಿ ಇಲ್ಲಿಯೂ ಸಹ ಭ್ರಷ್ಟಾಚಾರ ಮಾಡುತ್ತಿದ್ದಾರೆ. ವಾಲಿಬಾಲ್ ಕ್ರೀಡಾಪಟುಗಳಿಂದ 20 ಸಾವಿರ ರೂ. ಹಣ ಪಡೆಯುವ ಬದಲು 40 ರಿಂದ 50 ಸಾವಿರ ರೂ. ಪಡೆದು ಅವರನ್ನು ಶೋಷಿಸುತ್ತಿದ್ದಾರೆ. ಇಲ್ಲದೇ ನ.10 ರಿಂದ 13 ರ ವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾರತ – ಶ್ರೀಲಂಕಾ ವಿಕಲಚೇತನರ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುತ್ತಿರುವುದು ಅಕ್ರಮ. ಕ್ರೀಡಾಪಟುಗಳನ್ನು ಆಯ್ಕೆ ಪ್ರಕಿಯೆ ಮೂಲಕ ಆಯ್ಕೆ ಮಾಡದೇ ಫೋನ್ ಮುಖಾಂತರ ಆಯ್ಕೆ ಮಾಡಿರುವುದು ಅನ್ಯಾಯ.” ಎಂದು ಖಂಡಿಸಿದರು.

“ಆಯ್ಕೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪತ್ರಿಕಾಗೋಷ್ಠಿಯನ್ನೂ ಕರೆದಿಲ್ಲ. ಕಾನೂನು ಬಾಹಿರವಾಗಿ ಶ್ರೀಲಂಕಾ ತಂಡವನ್ನು ಪಂದ್ಯಾವಳಿಗೆ ಆಹ್ವಾನಿಸಿದ್ದಾರೆ. ಇದೆಲ್ಲವನ್ನೂ ಪ್ಯಾರಾ ಒಲಂಪಿಕ್ ಕೂಟ ಮತ್ತು ಕ್ರೀಡಾ ನಿರ್ದೇಶಕರ ಗಮನಕ್ಕೆ ತಂದಿತ್ತಾದರೂ ಅವರು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ”. ಚಂದ್ರಶೇಖರ್ ಅವರನ್ನು ಪ್ಯಾರಾ ಒಲಂಪಿಕ್ ಸಂಸ್ಥೆಯಿಂದ ಉಚ್ಛಾಟನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಕಲಚೇತನ ಕ್ರೀಡಾಪಟು ಗಣೇಶ್ ಮತ್ತು ತೀರ್ಥರಾಜು ಹಾಜರಿದ್ದರು.

Leave a Reply

comments

Related Articles

error: