ಸುದ್ದಿ ಸಂಕ್ಷಿಪ್ತ

ಜಿ.ಎಸ್.ಭಟ್ಟ ಅವರ ಕೃತಿಗಳ ಲೋಕಾರ್ಪಣೆ

ಜಾನಪದ ವಿದ್ವಾಂಸ, ಯಕ್ಷಗಾನ ಚಿಂತಕ ಜಿ.ಎಸ್.ಭಟ್ಟ ಅವರು ರಚಿಸಿರುವ ಶತಮಾನದ ಶಕಪುರುಷ ದೇಜಗೌ ಮತ್ತು ಕುವೆಂಪು ಕೃತಿಶೈಲ (ಸಂಪಾದಿತ) ಕೃತಿಗಳ ಲೋಕಾರ್ಪಣೆ ಮೈಸೂರಿನ ಜಯಲಕ್ಷ್ಮೀಪುರಂ, ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ನ.12ರ ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಜೆ.ಶಶಿಧರ ಪ್ರಸಾದ್ ವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಕೃತಿಗಳ ಲೋಕಾರ್ಪನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೊ.ದೇಜಗೌ ಅವರು ರಚಿಸಿದ ತೀನಂಶ್ರೀ ಪುಸ್ತಕವು ಲೋಕಾರ್ಪಣೆಗೊಳ್ಳಲಿದೆ. ಸಮಾರಂಭವನ್ನು ನಗರದ ಇನೊವೇಟಿವ್ ಸಂಸ್ಥೆ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ಚೇತನ ಬುಕ್ ಹೌಸ್ ಸಂಯುಕ್ತವಾಗಿ ಹಮ್ಮಿಕೊಂಡಿದೆ.

Leave a Reply

comments

Related Articles

error: