ಕ್ರೀಡೆದೇಶ

ಧೋನಿ ಬೆಂಬಲಕ್ಕೆ ನಿಂತ ರವಿಶಾಸ್ತ್ರಿ

ನವದೆಹಲಿ,ನ.10-ಟಿ-20 ಕ್ರಿಕೆಟ್ ನಲ್ಲಿ ಧೋನಿಯ ಜಾಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಹಾಗೂ ಆಕಾಶ್ ಚೋಪ್ರಾ ಹೇಳಿದ್ದರು. ಈ ವಿಚಾರವಾಗಿ ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.

ಧೋನಿ ಓರ್ವ ನಿಜವಾದ ಟೀಮ್ ಮ್ಯಾನ್. ನಮ್ಮ ಸುತ್ತಲೂ ಹಲವಾರು ಅಸೂಯೆಯ ವ್ಯಕ್ತಿಗಳಿದ್ದಾರೆ. ಮತ್ಸರದ ವ್ಯಕ್ತಿಗಳು ಧೋನಿಯ ಅಂತಾರಾಷ್ಟ್ರೀಯ ವೃತ್ತಿಬದುಕು ಕೊನೆಗೊಳ್ಳುವುದನ್ನು ನೋಡಲು ಬಯಸುತ್ತಿದ್ದಾರೆ. ಶ್ರೇಷ್ಠ ಆಟಗಾರ ತನ್ನ ಭವಿಷ್ಯವನ್ನು ಆತನೇ ನಿರ್ಧರಿಸುತ್ತಾನೆ ಎಂದಿದ್ದಾರೆ ರವಿಶಾಸ್ತ್ರಿ.

ಧೋನಿಯ ಸಾಮರ್ಥ್ಯವೇನೆಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಚೆನ್ನಾಗಿ ಗೊತ್ತಿದೆ. ಐಕಾನ್ ವಿಕೆಟ್ ಕೀಪರ್ಬ್ಯಾಟ್ಸ್ಮನ್ ವಿರುದ್ಧದ ಟೀಕೆ ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ ಎಂದಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: