ಮೈಸೂರು

ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನ ಮನೋಭಾವದಿಂದ ಸ್ವೀಕರಿಸಬೇಕು: ಸಚಿವ ಡಾ.ಮಹದೇವಪ್ಪ

ಮೈಸೂರು (ನ.10) : ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಯುವಜನರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.

ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಉಪನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ನಂಜನಗೂಡು ತಾಲ್ಲೂಕಿನ ಹದಿನಾರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ವಿಭಾಗದಿಂದ ಗುರುವಾರ ಆಯೋಜಿಸಲಾಗಿದ್ದ 2017-18 ನೇ ಸಾಲಿನ ಮೈಸೂರು ವಿಭಾಗ ಮತ್ತು ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಯ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ, ಬಾಲಕಿಯರ ಪಂದ್ಯಾವಳಿಯ ಧ್ವಜಾರೋಹಣ ನೇರವೇರಿಸಿ ಆಕಾಶಕ್ಕೆ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ಯವಕರು, ಯುವತಿಯರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಆಗ ಮಾತ್ರ ಸಧೃಡ ದೇಹ ಹಾಗೂ ಮನಸ್ಸನ್ನು ರೂಪಿಸಿಕೊಳ್ಳಬಹುದು. ಕ್ರೀಡಾಶಕ್ತಿ ರೂಪಿಸಿಕೊಂಡರೆ ಕ್ರೀಡೆಯಿಂದ ರಾಷ್ಟ್ರ ಪ್ರೇಮ ಮೂಡಿಸಬಹುದು. ತಾವು ವಿದ್ಯಾಭ್ಯಾಸ ಸಂದರ್ಭದಲ್ಲಿ ಹದಿನಾರು ಪ್ರೌಢ ಶಾಲೆಯಲ್ಲಿ ಓದುವಾಗ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದೆ ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

480 ಕ್ರೀಡಾಪಟುಗಳು ಮತ್ತ 64 ಕೋಚ್ ಮತ್ತು ವ್ಯವಸ್ಥಾಪಕರು ಭಾಗವಹಿಸಿದ್ದಾರೆ. ಬಾಲಕರಿಗೆ ಶಾಲೆಯಲ್ಲಿ ವಸತಿ ಮತ್ತು ಬಾಲಕಿಯರಿಗೆ ಛತ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಮೈಸೂರು ವಿಭಾಗ ಮಟ್ಟದ ಮೈಸೂರು, ಚಾಮರಾಜನಗರ ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಮಂಗಳೂರು ಉಡುಪಿ ಜಿಲ್ಲೆಗಳಿಂದ ಒಟ್ಟು 32 ತಂಡಗಳು ಪಾಲ್ಗೊಂಡಿದ್ದು 14 ಮತ್ತು 17 ವರ್ಷದೊಳಗಿನ ಬಾಲಕರ 16 ತಂಡ ಮತ್ತು ಬಾಲಕಿಯರ 16 ತಂಡಗಳು ನಾಕೌಟ್ ಪಂದ್ಯಗಳನ್ನು ಆಡಿ ರಾಜ್ಯ ಮಟ್ಟಕ್ಕೆ 4 ತಂಡ ಆಯ್ಕೆ ಆಗಲಿವೆ.

ರಾಜ್ಯಮಟ್ಟದ 4 ವಿಭಾಗಗಳಾದ ಮೈಸೂರು, ಬೆಂಗಳೂರು, ಗುಲ್ಬರ್ಗಾ, ಬೆಳಗಾಂ ತಂಡಗಳ ಲೀಗ್ ಪಂದ್ಯಗಳು ಶುಕ್ರವಾರ ನಡೆಯಲಿದೆ ಹಾಗೂ ಸಮಿಫೈನಲ್ ಮತ್ತು ಫೈನಲ್ ಶನಿವಾರ ನಡೆಯಲಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡದ 4 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುತ್ತವೆ ಎಂದು ಹದಿನಾರು ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ತಿರುಮಲೇಶ್ ಅವರು ತಿಳಿಸಿದರು.

ಆಟದ ಮೈದಾನದಲ್ಲಿ ನಾಲ್ಕು ಅಂಕಣ ಸಿದ್ಧಪಡಿಸಿ ಅಂಕಣಗಳಿಗೆ ಝಾನ್ಸಿ, ಇಳ, ಅರ್ಜುನ ಮತ್ತು ಏಕಲವ್ಯ ಹೆಸರುಗಳನ್ನು ಇಡಲಾಗಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಕಳಲೆ ಕೇಶವಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ. ಸಿದ್ದರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜಿಲ್ಲಾಧಿಕಾರಿ ರಂದೀಪ್ ಡಿ., ವರುಣಾ ಕ್ಷೇತ್ರದ ವಸತಿ ಯೋಜನೆ ಮತ್ತು ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಹಾಗೂ ಇನ್ನಿತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: