ಮೈಸೂರು

ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿರುವ ಬಾಬರ್ ಅಲಿ : ವಿಶೇಷ ಉಪನ್ಯಾಸ

ಮೈಸೂರು, ನ.10 : ಲರ್ನರ್ಸ್ ಪಿ.ಯು. ಕಾಲೇಜು, ಆಲ್ ಇಂಡಿಯಾ ಕಾರ್ಪೋರೆಟ್ ಫಾರ್ ಸ್ಕಿಲ್ ಡೆವಲಪ್ ಮೆಂಟ್, ಹರಿ ವಿದ್ಯಾಲಯ, ಶಾರದಾ ಪಬ್ಲಿಕ್ ಶಾಲೆ, ಸುಪ್ರೀಮ್ ಶಾಲೆ, ರೋಟರಿ ವೆಸ್ಟ್  ಮೊದಲಾದ ಸಂಘಟನೆಗಳು ಸಂಯುಕ್ತವಾಗಿ ನ.14ರಂದು ಆಯೋಜಿಸಿರುವ ಮಕ್ಕಳ ದಿನಾಚರಣೆಯಲ್ಲಿ ಅತಿ ಕಿರಿಯ ಮುಖ್ಯೋಪಾಧ್ಯಯ ಕೀರ್ತಿಗೆ ಪಾತ್ರರಾಗಿರುವ ಪಶ್ಚಿಮ ಬಂಗಾಳದ ಬಾಬರ್ ಅಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರೊ.ನಾಗರಾಜು ತಿಳಿಸಿದರು.

ಅಂದು ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಾಬರ್ ಅಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಬರ್ ಅಲಿ ಯವರು ತಮ್ಮ 9ನೇ ವಯಸ್ಸಿನಲ್ಲಿಯೇ ಪದವಿ ಪಡೆದಿದ್ದು, ನಂತರ 16ನೇ ವಯಸ್ಸಿನಲ್ಲಿಯೇ ಶಾಲೆಯೊಂದ ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇವರ ಬಗ್ಗೆ ಸಿಬಿ.ಎಸ್ ಇ ಮತ್ತು ಪಿ.ಯು.ಸಿಯಲ್ಲಿ ಪಠ್ಯ ಪುಸ್ತಕವಿದೆ, ಇವರಿಗೆ ಸಿಎನ್ಎನ್ ಐಬಿ ಎನ್ ರಿಯಲ್ ಹೀರೋ, ಬಿಬಿಸಿಯ ಅತಿ ಕಿರಿಯ ಮುಖ್ಯೋಪಾಧ್ಯಯ, ಎನ್.ಡಿ.ಟಿವಿಯ ಇಂಡಿಯಾ ಆಫ್ ದ ಇಯರ್ ಮುಂತಾದ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಇವರೊಂದಿಗೆ ನಡೆಯುವ ಸಂವಾದವು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹು ಉಪಯುಕ್ತವಾಗಿದ್ದು ಪ್ರವೇಶ ಉಚಿತವಿದೆ, ನೋಂದಣಿಗಾಗಿ 9916933202, 9916397939 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲರ್ನರ್ಸ್ ಪಿ.ಯು.ಕಾಲೇಜಿನ ಮುರಳಿ ಮೋಹನ್, ಪ್ರೊ.ಸತ್ಯಂ, ಹೆಚ್.ಆರ್.ಭಗವಾನ್, ನಿಶಾಂತ್ ಕುಮಾರ್ ಗೌತಮ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: