ಮೈಸೂರು

ನವೆಂಬರ್ 12 ರಂದು ರಂಗೋಲಿ ಸ್ಪರ್ಧೆ

ಮೈಸೂರು (ನ.11): ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ದಸರಾ ವಸ್ತುಪ್ರದರ್ಶನ-2017ರ ಅಂಗವಾಗಿ ರಚಿಸಿರುವ ಲಲಿತಕಲಾ ಮತ್ತು ಕರಕುಶಲ ಉಪಸಮಿತಿಯ ಉದ್ಘಾಟನಾ ಸಮಾರಂಭವನ್ನು ನ.12 ರಂದು ಬೆಳಿಗ್ಗೆ 10-30 ಗಂಟೆಗೆ ಏರ್ಪಡಿಸಲಾಗಿದೆ.

ಸದರಿ ಉದ್ಘಾಟನಾ ಸಮಾರಂಭದಂದು ಕಲಾವಿದರು ಹಾಗೂ ಮಹಿಳೆಯರಿಗೆ “ರಂಗೋಲಿ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದ್ದು, ಆಸಕ್ತಿಯುಳ್ಳವರು ತಾವು ಉಪಯೋಗಿಸುವ ಸಾಮಗ್ರಿಗಳೊಂದಿಗೆ ಒಂದು ಗಂಟೆ ಮುಂಚಿತವಾಗಿ ಕಛೇರಿಗೆ ಬಂದು ಹೆಸರನ್ನು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಜಮೀಲಾ, ಸಹಾಯಕರು, ಮೊಬೈಲ್ ದೂರವಾಣಿ ಸಂಖ್ಯೆ : 9916204642 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: