ಮನರಂಜನೆ

ಬಹು ನಿರೀಕ್ಷಿತ ಪದ್ಮಾವತಿ ಚಿತ್ರದ ಎರಡನೇ ಹಾಡು ಬಿಡುಗಡೆ

ದೇಶ(ಮುಂಬೈ)ನ.11:- ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಪದ್ಮಾವತಿ ಹಲವು ವಿವಾದಗಳ ಸುಳಿಗೆ ಸಿಲುಕಿದ್ದರೂ ಈ ವಿವಾದದ ನಡುವೆಯೇ  ಚಿತ್ರದ ಎರಡನೇ ಹಾಡು ಬಿಡುಗಡೆಗೊಂಡಿದೆ.

‘ಏಕ್ ದಿಲ್ ಏಕ್ ಜಾನ್’’ ಈ ರೋಮ್ಯಾಂಟಿಕ್ ಹಾಡಿನಲ್ಲಿ ರಾಣಿ ಪದ್ಮಾವತಿಯಾಗಿರುವ ದೀಪಿಕಾ ಪಡುಕೋಣೆ ಮತ್ತು ಮಹಾರಾಜನಾಗಿರುವ ಶಾಹಿದ್ ಕಪೂರ್ ಅವರ ಕೆಮೆಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಈ ಹಾಡಿನಲ್ಲಿ ರಾಣಿ ಪದ್ಮಾವತಿ ತನ್ನ ಪತಿಯನ್ನು ಯುದ್ಧಕ್ಕೆ ಸಿದ್ದಗೊಳಿಸುತ್ತ, ಪತಿಯ ಎದುರು ಹಸನ್ಮುಖಳಾಗಿರುವಂತೆ ಆತ ಹೊರಟಾಗ ಕಣ್ಣಿಂದ ಕಂಬನಿ ಜಾರುವ  ದೃಶ್ಯ ಕಂಡು ಬರುತ್ತಿದ್ದು, ಶಾಹಿದ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟನೆ ಅದ್ಭುತವಾಗಿ ಮೂಡಿ ಬಂದಿದೆ ಎನ್ನಲಾಗಿದೆ.

Leave a Reply

comments

Related Articles

error: