ಮೈಸೂರು

ವಿಚಾರಾಣಾಧೀನ ಖೈದಿ ಹತ್ಯೆ ಹಿಂದೆ ಸಂಘಪರಿವಾರದ ಸಂಚು: ಎಸ್‌ಡಿಪಿಐ ಆರೋಪ

ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಖೈದಿಯಾಗಿ ಮೈಸೂರಿನ ಕಾರಾಗೃಹದಲ್ಲಿದ್ದ ಮುಸ್ತಫನನ್ನು ಸಹ ಖೈದಿ ಕಿರಣ್ ಶೆಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ.

“ಈ ಘಟನೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಅತ್ಯಂತ ಭದ್ರತೆಯಿರುವ ಜೈಲಿನಲ್ಲಿ ಈ ಪ್ರಕರಣ ನಡೆದಿರುವುದು ಸಂಘಪರಿವಾರದ ಷಡ್ಯಂತ್ರದ ಒಂದು ಭಾಗವಾಗಿದೆ. ರಾಜ್ಯ ಸರಕಾರದ ಅಧೀನದಲ್ಲಿ ಬರುವ ಬಂದೀಖಾನೆ ಇಲಾಖೆಯ ಜೈಲಿನಲ್ಲಿ ಈ ಘಟನೆ ನಡೆದಿರುವುದರಿಂದ ಈ ಘಟನೆಯ ಹೊಣೆಯನ್ನು ಸರಕಾರವೇ ಹೊರಬೇಕಾಗುತ್ತದೆ. ಸಂಘಪರಿವಾರದ ಪ್ರಚೋದನಾತ್ಮಕ ಹೇಳಿಕೆಯಿಂದ ಈ ಕೊಲೆ ನಡೆದಿರಬಹುದಾದ ಶಂಕೆಯಿದ್ದು, ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದುದರಿಂದ ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು, ಆರೋಪಿ ಕಿರಣ್ ಶೆಟ್ಟಿಯನ್ನು ಈ ವರೆಗೆ ಭೇಟಿಯಾಗಿರುವ ಮತ್ತು ಫೋನ್ ಕರೆ ಸಂಭಾಷಣೆ ನಡೆಸಿರುವ ವ್ಯಕ್ತಿಗಳನ್ನೆಲ್ಲಾ ತನಿಖೆ ನಡೆಸಬೇಕಿದೆ ಮತ್ತು ಸರಕಾರದ ಅಧೀನದಲ್ಲಿರುವ ಜೈಲಿನಲ್ಲಿ ಈ ಘಟನೆ ನಡೆದಿರುವ ಕಾರಣ ಮುಸ್ತಫರವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು” ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಆಗ್ರಹಿಸಿದ್ದಾರೆ.

Leave a Reply

comments

Related Articles

error: