ಮೈಸೂರು

ಸಾಹಿತ್ಯ ಸಮ್ಮೇಳನದ ಸ್ಥಳೀಯ ನೋಂದಣಿ ಕಚೇರಿ ಉದ್ಘಾಟನೆ

ಮೈಸೂರು (ನ.12): ಕನ್ನಡದ ತೇರನ್ನು ಎಳೆಯಲು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದು ಲೋಕೋಪಯೋಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.

ಶನಿವಾರ ಅವರು ಮೈಸೂರಿನ ಡಾ.ಬಾಬು ಜಗಜೀವನ್ ರಾಂ ಭವನದ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಿಂದ 7575 ಪ್ರತಿನಿಧಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದರೆ ಅದರಲ್ಲಿ 4982 ಪರುಷರು ಮತ್ತು 1793 ಮಹಿಳೆಯರು, ಮೈಸೂರು ಜಿಲ್ಲೆಯಿಂದ 800 ಮಂದಿ ಯಲ್ಲಿ 550 ಪುರುಷ ಮತ್ತು 250 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದರು.

ನೋಂದಣಿ ಕಚೇರಿಯಲ್ಲಿ ಸ್ಥಳೀಯರು ನ.11 ರಿಂದ 21ರ ವರಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರಗೆ ನೋಂದಾಯಿಸಿಕೊಳ್ಳಬಹುದು ಆದರೆ ಇವರುಗಳಿಗೆ ವಸತಿ ಸೌಲಭ್ಯ ಇರುವುದಿಲ್ಲ ಎಂದು ತಿಳಿಸಿದರು.

ಮೈಸೂರಿನ ಅಕ್ಕಪಕ್ಕದ ಜಿಲ್ಲೆಯ ಪ್ರತಿನಿಧಿಗಳಿಗೆ ನ.22 ಮತ್ತು 23ರಂದು ನೋಂದಾಣಿ ಅವಕಾಶ ಕಲ್ಪಿಸಿದೆ. 250 ರೂ ನೋಂದಣಿ ಶುಲ್ಕ ವಿರುತ್ತದೆ. ನೋಂದಾಯಿಸಿಕೊಂಡವರಿಗೆ ಸಮ್ಮೇಳನದ ಕಿಟ್ ನೀಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ವಾಸು, ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆವೀರೇಶ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎಂ.ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೋಮಶೇಖರ್, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: