ಕರ್ನಾಟಕಪ್ರಮುಖ ಸುದ್ದಿ

ಮದುವೆ ಮಂಟಪದಿಂದ ಓಡಿದ ವಧು

ರಾಜ್ಯ(ತುಮಕೂರು)ನ.12:- ಮದುವೆ ಮಂಟಪದಿಂದ ವಧು ಓಡಿ ಹೋದ ಘಟನೆ ನಡೆದಿದ್ದು,ಅರ್ಧಕ್ಕೆ ಮದುವೆ ನಿಂತ ಘಟನೆ ನಡೆದಿದೆ.

ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದಲ್ಲಿ  ಇಂದು ಬೆಳಗ್ಗೆ 9.30ಕ್ಕೆ  ಮದುವೆ ಮುಹೂರ್ತವಿತ್ತು. ರಾಮಾಕೃಷ್ಣ- ರಮ್ಯಾ ವಧು ವರರಾಗಿದ್ದರು.ನಿನ್ನೆ ರಾತ್ರಿ ಆರತಕ್ಷತೆ ನಡೆದಿತ್ತು. ಆರತಕ್ಷತೆಯಲ್ಲಿ ವಧು ರಮ್ಯಾ ಖುಷಿಯಿಂದಲೇ ಇದ್ದಳು. ರಾತ್ರೋ ರಾತ್ರಿ ಕಾಣೆಯಾಗಿದ್ದಾಳೆ. ರಮ್ಯಾ ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೂಲದ ಯುವತಿಯಾಗಿದ್ದು, ರಾಮಕೃಷ್ಣ ಎಡೆಯಯೂರು ನಿವಾಸಿಯಾಗಿದ್ದು, ಆಟೋ ಡ್ರೈವರ್ ಆಗಿದ್ದ. ವಧು ಓಡಿ ಹೋಗಿದಕ್ಕೆ ಕಾರಣ ತಿಳಿದು ಬಂದಿಲ್ಲ.

Leave a Reply

comments

Related Articles

error: