ಮೈಸೂರು

ವೃದ್ಧೆಯ ಮಾಂಗಲ್ಯ ಚೈನ್ ಎಗರಿಸಿ ಪರಾರಿ

ಮೈಸೂರು,ನ.12:- ಹಿನಕಲ್ ರಿಂಗ್ ರೋಡ್ ಬಳಿಯ ಕಲ್ಯಾಣ ಮಂಟಪದ ಬಳಿ ದುಷ್ಕರ್ಮಿಯೋರ್ವ ವೃದ್ಧೆಯ ಮಾಂಗಲ್ಯ ಚೈನ್ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಇಲಾವಾಲ ಹೋಬಳಿಯ ಚಿಕ್ಕೆಗೌಡನ ಕೊಪ್ಪಲಿನ ನಿವಾಸಿ ಭದ್ರಮ್ಮ (60) ಅವರ 35 ಗ್ರಾಂ ಮಾಂಗಲ್ಯ ಸರ ಅಪಹರಣ ಮಾಡಲಾಗಿದೆ. ದಾರಿ ಮಧ್ಯೆ ಮಹಿಳೆ ಪರ್ಸ್  ಬೀಳಿಸಿದ್ದು, ಯುವಕ ಡ್ರಾಮಾ ಮಾಡಿದ್ದಾನೆ.ಮಹಿಳೆ ಪರ್ಸ್ ಎತ್ತಿಕೊಂಡು ಸಾಗುವಾಗ ಯುವಕ ಬಂದು ಇದು ನನ್ನ ಪರ್ಸ್ ಎಂದು ಮಹಿಳೆಯಿಂದ ಪರ್ಸ್ ಕಿತ್ತು ಪರಾರಿ ಯಾಗಿದ್ದಾನೆ. ಇದೇ ವೇಳೆ ಅಲ್ಲೇ ಇದ್ದ ಮಹಿಳೆ ಮಾಂಗಲ್ಯ ಬಿಚ್ಚಿ ಮಾಂಗಲ್ಯ ಸರ ಕೊರಳಿನಲ್ಲಿದ್ದರೆ ಅಪಾಯ ಎಂದು ಸಲಹೆ ನೀಡಿದ್ದು, ಅಜ್ಜಿ ಕೊರಳಿನಿಂದ ಸರ ಬಿಚ್ಚಿದ ಕ್ಷಣಾರ್ಧದಲ್ಲೇ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ. ಹಾಡು ಹಗಲೇ ಈ ಘಟನೆ ನಡೆದಿದೆ. ಮಲ್ಲಿಗೆ ನಗರಿಯಲ್ಲಿ ವಯೋವೃದ್ಧರ ಸರ ಕಸಿಯುವ ಗ್ಯಾಂಗ್ ಆ್ಯಕ್ಟೀವ್ ಆಗಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: