ಮೈಸೂರು

ಸುಲಿಗೆ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ವಂಚಕರ ಬಂಧನ

ಮೈಸೂರು,ನ.13:- ಮೈಸೂರು ನಗರ ಉದಯಗಿರಿ ಪೊಲೀಸರು ಮಾಹಿತಿ ಮೇರೆಗೆ ಎನ್.ಆರ್. ಮೊಹಲ್ಲಾ, ಕೆಸರೆ, ಅಜೀಜ್ ಹೋಟೆಲ್ ಹತ್ತಿರ ಕಾರ್ಯಾಚರಣೆ ನಡೆಸಿ  ಅನುಮಾನಾಸ್ಪದವಾಗಿ ಟಿವಿಎಸ್ ವಿಕ್ಟರ್ ಮತ್ತು ಹೊಂಡಾ ಆಕ್ಟಿವಾ ವಾಹನದಲ್ಲಿ  ನಿಂತಿದ್ದ  ಸುಲಿಗೆ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು  ಎನ್.ಆರ್. ಮೊಹಲ್ಲಾ  ನಿವಾಸಿ ಕೆಸರೆ ಬೆಲವತ್ತ ಗ್ರಾಮದ   ಮಹಮದ್ ಕಲೀಂ ಅಲಿಯಾಸ್  ಗಬೇಲಾ ಬಿನ್ ಬಾಬು ಅನ್ವರ್ ಪಾಷ, (20) ಹಾಗೂ ರಾಜೀವನಗರದ  ಮಹಮದ್ ಕಾಶಿಫ್ ಅಲಿಯಾಸ್  ಬಡಾ ಬೈ ಬಿನ್ ಎಕ್ಬಾಲ್ ಪಾಷ,( 20) ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಿ ನ.10ರಂದು ಬಂಧಿಸಿ ವಿಚಾರಿಸಲಾಗಿ  ಆರೋಪಿಗಳು ನ.7ರಂದು  ಬೆಳಗಿನ ಜಾವ ಸುಮಾರು 4.30ರ ವೇಳೆ  ಮಂಡಿ ಮೊಹಲ್ಲಾ ಇರ್ವಿನ್ ರಸ್ತೆಯಲ್ಲಿ ಒಂದು ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯಿಂದ ಹಣ, ಚಿನ್ನಾಭರಣ  ಮತ್ತು 3 ಮೊಬೈಲ್ ಫೋನ್‍ಗಳು ಇದ್ದ ಒಂದು ವ್ಯಾನಿಟಿ ಬ್ಯಾಗ್‍ನ್ನು ಕಿತ್ತುಕೊಂಡು ಹೋಗಿದ್ದ ಕುರಿತು ಬಾಯ್ಬಿಟ್ಟಿದ್ದಾರೆ.  ಮಹಮದ್ ಕಲೀಂ ಅಲಯಾಸ್  ಗಬೇಲಾ ಅಕ್ಟೋಬರ್ 24 ರಂದು ಸಂಜೆ 5.15 ರ ವೇಳೆ ವಿ.ಟಿ.ಯು. ಕಾಲೇಜು ರಿಂಗ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ  ಒಬ್ಬ ಮಹಿಳೆಯಿಂದ ನಗದು ಹಣ, ಒಂದು ಮೊಬೈಲ್ ಫೋನ್ ಇತರೇ ದಾಖಲಾತಿಗಳಿದ್ದ  ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು ಹೋಗಿರುವುದಾಗಿ ತಿಳಿಸಿದ್ದು,  ಮಹಮದ್ ಕಾಶಿಫ್ ಅಲಿಯಾಸ್ ಬಡಾ ಬೈ ಸೆಪ್ಟೆಂಬರ್ 9 ರಂದು ಸಂಜೆ 7.20 ರವೇಳೆ  ಉದಯಗಿರಿ ಬಿಲಾಲ್ ಮಸೀದಿ ಪಕ್ಕದ ರಸ್ತೆಯಲ್ಲಿ ಒಂದು ಮನೆಯ ಮುಂಭಾಗ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್  ಕಳ್ಳತನ ಮಾಡಿರುವ ಕುರಿತು ಬಾಯ್ಬಿಟ್ಟಿದ್ದಾನೆ. ಬಂಧಿತ ಆರೋಪಿಗಳಿಂದ   ಒಟ್ಟು ರೂ. 90,000/- ಮೌಲ್ಯದ 2 ದ್ವಿ ಚಕ್ರ ವಾಹನಗಳು (1-ಹೊಂಡಾ ಆಕ್ಟಿವಾ, 1-ಟಿವಿಎಸ್ ವಿಕ್ಟರ್-), ಚಿನ್ನದ ನೆಕ್ಲೇಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ನಗದು ಹಣವನ್ನು ಆರೋಪಿಗಳು ಸ್ವಂತಕ್ಕೆ ಖುರ್ಚು ಮಾಡಿಕೊಂಡಿದ್ದು, ಮೊಬೈಲ್‍ಗಳನ್ನು ದಾರಿ ಹೋಕರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಮಹಮದ್ ಕಲೀಂ ಅಲಿಯಾಸ್  ಗಬೇಲಾ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ  ಡಿ.ಸಿ.ಪಿ.   ಡಾ. ವಿಕ್ರಮ್ ವಿ ಅಮಟೆ ರವರ ಮಾರ್ಗದರ್ಶನದಲ್ಲಿ  ದೇವರಾಜ ವಿಭಾಗದ ಎ.ಸಿ.ಪಿ.  ಬಿ.ಎಸ್. ರಾಜಶೇಖರ್ ರವರ ನೇತೃತ್ವದಲ್ಲಿ  ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂತೋಷ್.ಪಿ.ಪಿ, ಪಿ.ಎಸ್.ಐ.  ರಾಜು. ಎಸ್., ಎಂ.ಜೈಕೀರ್ತಿ, ಎ.ಎಸ್.ಐ. ಬಾಬು ಲೋಕನಾಥನ್, ಸಿಬ್ಬಂದಿಗಳಾದ ಬಾಬು. ಎಂ.ಎಂ, ಕೃಷ್ಣ. ಆರ್.ಎಸ್., ಮಂಜುನಾಥ್. ಎಂ.ಎಂ, ಸಿದ್ದಿಕ್ ಅಹಮದ್, ಮೋಹನ್‍ಕುಮಾರ್. ಎಂ., ಮಾಡಿದ್ದು,

ಪೊಲೀಸರ ಕಾರ್ಯವನ್ನು  ಮೈಸೂರು ನಗರದ ಪೊಲೀಸ್ ಆಯುಕ್ತ ಡಾ: ಎ. ಸುಬ್ರಮಣ್ಯೇಶ್ವರ ರಾವ್ಶ್ಲಾಘಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: