ಪ್ರಮುಖ ಸುದ್ದಿವಿದೇಶ

ಇರಾನ್-ಇರಾಕ್ ಗಡಿಯಲ್ಲಿ 7.3 ತೀವ್ರತೆಯಲ್ಲಿ ಭಾರಿ ಭೂಕಂಪ; 140ಕ್ಕೂ ಹೆಚ್ಚು ಮಂದಿ ಸಾವು

ತೆಹ್ರೇನ್, ನ.13-ಇರಾನ್-ಇರಾಕ್ ಗಡಿಯಲ್ಲಿ ಭಾನುವಾರ ತಡ ರಾತ್ರಿ ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.

ಅಮೆರಿಕದ ಜಿಯಾಲಾಜಿಕಲ್ ಸರ್ವೇ ಪ್ರಕಾರ ಹಲಾಬ್ಜಾದಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು, ಇರಾನ್ನಿನ ಈಶಾನ್ಯ ಗಡಿ ಭಾಗದಲ್ಲಿ 7.3 ತೀವ್ರತೆ ದಾಖಲಾಗಿದೆ. ಟರ್ಕಿ, ಕುವೈತ್ ಮತ್ತು ಅರಬ್ ರಾಷ್ಟ್ರಗಳಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ.

ಇರಾನ್‍ನ ಮಾಧ್ಯಮ ಸಂಸ್ಥೆ ಐಆರ್ ಎನ್ಎ ಪ್ರಕಾರ ಈ ಭೂಕಂಪದಲ್ಲಿ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಘರ್ಸ್ ಇ ಶಿರಿನ್ ಗವರ್ನರ್ ಫರಾಮರ್ಜ್ ಅಕ್ಬರಿ ಹೇಳಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: