ಮೈಸೂರು

ಇಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ರಾಮಾನುಜ ಹಾಗೂ ಅಗ್ರಹಾರ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶುಕ್ರವಾರ (ಇಂದು) ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜೆಎಸ್ಎಸ್ ಸುತ್ತೂರು, ರಾಮಾನುಜ ರಸ್ತೆ, ಬಸವೇಶ‍್ವರ ರಸ್ತೆ, ಸಿಹಿ ನೀರುಕಟ್ಟೆ, ತ್ಯಾಗರಾಜ ರಸ್ತೆ, ಸುಣ್ಣದ ಕೇರಿ, ವಿ.ವಿ. ಮಾರುಕಟ್ಟೆ, ಅಗ್ರಹಾರ, ಶಂಕರಮಠ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ದೊಡ್ಡಕೆರೆ ಮೈದಾನ ಹಾಗೂ ಜ್ಯೋತಿನಗರ ವಿದ್ಯುತ್ ವಿತರಣಾ  ಕೇಂದ್ರದಿಂದ ಹೊರಹೊಮ್ಮುವ ಮಾರಿಗುಡಿ ಮತ್ತು ಗೋಪಾಲಗೌಡ ಫೀಡರ್ ಗಳಲ್ಲಿ ಆರ್‍ಎಪಿಡಿಆರ್‍ಪಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಬೆ. 10 ರಿಂದ ಸಂಜೆ 4 ಗಂಟೆಯವರೆಗೆ ಬಿ.ಎನ್. ರಸ್ತೆ ಸುತ್ತಮುತ್ತ, ವಸ್ತುಪ್ರದರ್ಶನ ಸುತ್ತಮುತ್ತ, ಅಂಚೆ ತರಬೇತಿ ಕೇಂದ್ರದ ಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Leave a Reply

comments

Related Articles

error: