ಮನರಂಜನೆ

ಸರಿಗಮಪದಿಂದ ಹೊರನಡೆದ ಮಹಾಗುರು ರಾಜೇಶ್ ಕೃಷ್ಣನ್?

ಬೆಂಗಳೂರು,ನ.13-ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಸರಿಗಮಪ ಲಿಟಲ್ ಚಾಂಪ್ಸ್ ಮೆಗಾ ಆಡಿಷನ್ಸ್ ಶುರುವಾಗಿದೆ. ಆದರೆ ಸಾಕಷ್ಟು ಸೀಸನ್ ಗಳಿಂದ ಮುಖ್ಯ ಗುರುಗಳಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ತೀರ್ಪುಗಾರರ ನಟ-ಗಾಯಕ ರಾಜೇಶ್ ಕೃಷ್ಣನ್ ಸರಿಗಮಪ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

ರಾಜೇಶ್ ಕೃಷ್ಣನ್ ಬದಲಿಗೆ ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘುದೀಕ್ಷಿತ್ ಆಗಮಿಸಿದ್ದಾರೆ. ಕನ್ನಡದ ದೇಸಿ ಶೈಲಿಯ ಹಾಡುಗಳನ್ನ ವಿದೇಶದ ಜನರಿಗೂ ತಲುಪಿಸಿರುವ ರಘು ದೀಕ್ಷಿತ್ ಈ ಬಾರಿ ಮಹಾಗುರುಗಳಾಗಿ ಎಂಟ್ರಿ ಪಡೆದುಕೊಂಡಿದ್ದಾರೆ.

ದೀಕ್ಷಿತ್ ತೀರ್ಪುಗಾರರಾಗಿರೋದ್ರಿಂದ ಶೋ ಹೊಸ ರೂಪ ಪಡೆದುಕೊಳ್ಳುವ ಸಾಧ್ಯತೆ ಗಳಿವೆ. ಜೀ ವಾಹಿನಿಯಲ್ಲಿ ಸಕ್ಸಸ್ ಕಂಡಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 2 ಕೂಡ ಪ್ರಾರಂಭವಾಗ್ತಿದೆ. ಸರಿಗಮಪ ಲಿಟಲ್ ಚಾಂಪ್ಸ್ ಜೊತೆಯಾಗಿ ಕಾಮಿಡಿ ಕಿಲಾಡಿಗಳು ಬರ್ತಿದ್ದಾರೆ. ಇಷ್ಟು ವರ್ಷಗಳು ಜೊತೆಗಿದ್ದ ರಾಜೇಶ್ ಕೃಷ್ಣನ್ ಈಗ್ಯಾಕೆ ಹೊರ ನಡೆದರು ಅನ್ನೋದು ಮಾತ್ರ ಇನ್ನು ಗುಟ್ಟಾಗಿಯೇ ಉಳಿದುಕೊಂಡಿದೆ. (ವರದಿ-ಎಂ.ಎನ್)

Leave a Reply

comments

Related Articles

error: