ದೇಶಪ್ರಮುಖ ಸುದ್ದಿವಿದೇಶ

ಭೂಗತ ಪಾತಕಿ ದಾವೂದ್ ಚಟುವಟಿಕೆಗಳಿಗೆ ಬೆಂಬಲ ಇಲ್ಲ : ಯುಎಇ ಸ್ಪಷ್ಟನೆ

ದುಬೈ (ನ.13): “ನಮ್ಮ ನೆಲದಲ್ಲಿ ದಾವುದ್ ಇಬ್ರಾಹಿಂನ ಭಾರತ ವಿರೋಧಿ ಭೂಗತ ಚಟುವಟಿಕೆಗಳಿಗೆ ಬೆಂಬಲ ಅವಕಾಶ ನೀಡುವುದಿಲ್ಲ” ಎಂದು ಯುಎಇ ಸ್ಪಷ್ಟಪಡಿಸಿದೆ.

ಈ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ಕ್ರಮ ಕೈಗೊಳ್ಳಬಹುದಾದ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಭಾರತದ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದಲ್ಲಿ ಅಂಥಹ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದೆ. ದಾವುದ್‍ ಇಬ್ರಾಹಿಂಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ರಹಸ್ಯ ನೆಲೆ ಒದಗಿಸಿ ಪೋಷಣೆ ಮಾಡುತ್ತಿರುವುದು ಬಹಿರಂಗ ರಹಸ್ಯ. ಪಾಕಿಸ್ತಾನದ ನೆಲೆಯಲ್ಲಿ ನಿಂತು ದಾವುತ್‍ ತನ್ನ ಬಂಟರ ಮೂಲಕ ದುಬೈನಿಂದ ಕಾರ್ಯಚಟುವಟಿಕೆ ನಡೆಸದಂತೆ ಎಲ್ಲ ರೀತಿಯಲ್ಲೂ ತಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈವರೆಗೂ ಭಾರತದ ರಾಜತಾಂತ್ರಿಕ ಮೂಲಗಳು, ಉಭಯ ದೇಶಗಳ ಭದ್ರತಾ ಸಹಕಾರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು 2018ರ ಆರಂಭದಲ್ಲಿ ಯುಎಇಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದು ಈ ವೇಳೆ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ವೃದ್ದಿಸಲು ಹೊಸ ಹೆಜ್ಜೆ ಇಡುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಗುಪ್ತಚರ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲು ಮುಂದಾಗಿವೆ. ದಾವೂದ್ ಬಂಟರು ಇಂದಿಗೂ ಮುಂಬೈನಲ್ಲಿ ಪ್ರಾಬಲ್ಯ ಹೊಂದಿದ್ದು, ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ. ಇದರಿಂದ ಯುಎಇನಲ್ಲಿ ನಕಲಿ ಕಂಪನಿ ಆರಂಭಿಸಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

2015ರಲ್ಲಿ ಪ್ರಧಾನಿ ಮೋದಿ ಅಬುಧಾಬಿ ಭೇಟಿ ಮತ್ತು ಅಬುಧಾಬಿ ದೊರೆ ಮುಹಮ್ಮದ್ ಬಿನ್ ಝಯೇದ್ ಬಿನ್ ಸುಲ್ತಾನ್ ಅಲ್ ನಹ್ಯನ್ ಭಾರತಕ್ಕೆ ಪ್ರಜಾಪ್ರಭುತ್ವ ದಿನದ ಅತಿಥಿಯಾಗಿ ಆಗಮಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಗಣನೀಯವಾಗಿ ಸುಧಾರಣೆಯಾಗಿದೆ. ಇಂತಹ ಸನ್ನಿವೇಶವನ್ನು ದಾವುದ್ ಸಾಮ್ರಾಜ್ಯ ಮಟ್ಟ ಹಾಕಲು ನಿರ್ಧರಿಸಿರುವ ಭಾರತದ ಗುಪ್ತಚರ ಅಧಿಕಾರಿಗಳು, ಹಂತ ಹಂತವಾಗಿ ಆರ್ಥಿಕ ವ್ಯವಹಾರಗಳನ್ನು ನಾಶಮಾಡುವತ್ತ ಪ್ರಯತ್ನ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

(ಎನ್‍ಬಿಎನ್‍)

Leave a Reply

comments

Related Articles

error: