ಪ್ರಮುಖ ಸುದ್ದಿಮೈಸೂರು

ಮೈಸೂರಿನ ರಸ್ತೆಗಳಿಗೆ ಕೇಂದ್ರದಿಂದ ಬೃಹತ್ ಕೊಡುಗೆ

ಕೇಂದ್ರ ರಸ್ತೆ ಅನುದಾನದಲ್ಲಿ ಮೈಸೂರು ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 282 ಕೋಟಿ ರು. ಬಿಡುಗಡೆ ಮಾಡಿದ್ದು, ಮೈಸೂರಿನ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ನಿತಿನ್ ಗಡ್ಕರಿಯವರು ಬೃಹತ್ ಮೊತ್ತ ಬಿಡುಗಡೆ ಮಾಡಿದ್ದಾರೆ ಎಂದರು.

ಕಾಮಗಾರಿಗಳ ವಿವರ:

ಮೈಸೂರು ನಗರ: ಮೈಸೂರು-ಬೆಂಗಳೂರು ರಿಂಗ್‍ ರಸ್ತೆಯಿಂದ ಸರ್ಕಾರಿ ಅತಿಥಿಗೃಹ ರಸ್ತೆಗೆ 5 ಕೋಟಿ ರು., ನಗರದ ಸಿದ್ದಾರ್ಥ ಡೈರಿ ಸರ್ಕಲ್‍ನಿಂದ ಗೋಪಾಲಗೌಡ ಆಸ್ಪತ್ರೆ ಸರ್ಕಲ್ ರಸ್ತೆಗೆ 15 ಕೋಟಿ ರು. ಬಿಡುಗಡೆಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರ: ಇಲವಾಲ ಗ್ರಾಮದ ಸರಕಾರಿ ಆಸ್ಪತ್ರೆಯ ಬಳಿ ಅಪಘಾತ ತಡೆ ವಲಯ ಅಭಿವೃದ್ಧಿ ಕಾಮಗಾರಿಗಾಗಿ 2 ಕೋಟಿ ರು., ತಾಲೂಕಿನ ಕಡಕೋಳದಿಂದ ಜಯಪುರ ಸಂಪರ್ಕಿಸುವ ಸಿಎಚ್‍ 8 ಕಿ.ಮೀ. – 12.80 ಕಿ.ಮೀ. ವರೆಗೆ ರಸ್ತೆಗೆ 5 ಕೋಟಿ ರು., ಇಲವಾಲ ನಾಗವಾಲ ಬಿಸಾನಹುಡೆಯ 15 ಕಿ.ಮೀ. 24.80 ಕಿ.ಮೀ. ವರೆಗೆ ರಸ್ತೆಗೆ 4 ಕೋಟಿ ರು. ಹಾಗೂ ತಾಲೂಕಿನ ಸರ್ಕಿಟ್ ಹೌಸ್ ರಸ್ತೆ ಅಭಿವೃದ್ಧಿಗೆ 10 ಕೋಟಿ ರು.

ವರುಣಾ ಕ್ಷೇತ್ರ: ದಂಡೀಕೆರೆ ರಸ್ತೆಯಿಂದ ಪಿಲಹಳ್ಳಿ-ವರಕೂಡು –ಹೊಸಹುಂಡಿ-ಬಡಾಗಳಹುಂಡಿ-ಮೇಳಹಳ್ಳಿ ಮಾರ್ಗವಾಗಿ ಹಲೀಕೆರೆಹುಂಡಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 5 ಕೋಟಿ ರು., ಎಸ್‍.ಎಚ್.-80ರಿಂದ ಕೊಣನೂರು ಪುರ ಕೊನನೂರುಪಾಳ್ಯ ಮಾರ್ಗದ ರಸ್ತೆ ಅಭಿವೃದ್ಧಿಗೆ 5 ಕೋಟಿ ರು., ಹದಿನಾರು ಅಳ್ತೂರು ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2 ಕೋಟಿ ರು., ತಾಂಡವಪುರ-ಈಚಗಳ್ಳಿ-ಮರಳೂರು-ಗೊಡ್ಡನಪುರ ರಸ್ತೆ ಮಾರ್ಗವಾಗಿ ಬಿಡರಗೂಡು ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 10 ಕೋಟಿ ರು., ಲಕ್ಷ್ಮೀಪುರ ಮಾದೇಗೌಡನಹುಂಡಿ ಗ್ರಾಮದ ರಸ್ತೆಗೆ 1.50 ಕೋಟಿ ರು., ಕಲ್ಕುಂಡ, ಕಾಮಹಳ್ಳಿ, ತಗಡೂರು, ದೇವನೂರು ರಸ್ತೆ ಅಭಿವೃದ್ಧಿಗೆ 3.50 ಕೋಟಿ ರು., ಕುಡನಹಳ್ಳಿ, ಸೋಮೇಶ್ವರಪುರ ಮಾರಶೆಟ್ಟನಹಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿಗೆ 2.50 ಕೋಟಿ ರು., ಹಾಗೂ ವರುಣಾದಿಂದ ಅಳ್ತೂರು ಹಂಡಿಜೋಗಿಪಾಳ್ಯ ಕೈರಾಳು ಮಾರ್ಗದ ಹೊಸಕೋಟೆ ರಸ್ತೆಗೆ 10 ಕೋಟಿ ರು.

ನಂಜನಗೂಡು ಕ್ಷೇತ್ರ: ಸರಗೂರು-ಹೇಡಿಯಾಳು ರಸ್ತೆ ಅಭಿವೃದ್ಧಿ, ನಂಜನಗೂಡು ದೇವಸ್ಥಾನದ ಹೆದರು ಮೂಲ ಸೌಕರ್ಯಕ್ಕಾಗಿ 8 ಕೋಟಿ ರು. ದೇವಿರಮ್ಮನಹಳ್ಳಿ-ಮಲಕುಂಡಿ ರಸ್ತೆಗೆ 5 ಕೋಟಿ, ಹುಲ್ಲಳ್ಳಿ ಬೀರುವಾಲು ಕಂದೇಹಾಲ ಚಿಲಹಳ್ಳಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ 5 ಕೋಟಿ, ಬಿ.ಎನ್‍. ರಸ್ತೆ ಹಲ್ಲಾರೆ ರಸ್ತೆ ಅಭಿವೃದ್ಧಿಗೆ 7 ಕೋಟಿ ಹಾಗೂ ಹುರಯಿಂದ ಹಂಚೀಪುರ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ಬಿಡುಗಡೆಯಾಗಿದೆ.

ಅಂತೆಯೇ ಹುಣಸೂರು, ಪಿರಿಯಾಪಟ್ಟಣ, ಟಿ.ನರಸೀಪುರ, ಎಚ್‍.ಡಿ. ಕೋಟೆ, ಕೆ.ಆರ್. ನಗರ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೂ ಅನುದಾನ ಬಿಡುಗಡೆಯಾಗಿದೆ.

Leave a Reply

comments

Related Articles

error: