ಮೈಸೂರು

ವಾದ ವಿವಾದ ಹಾಗೂ ಸಂವಾದಗಳು ದೇಶದ ಅಭಿವೃದ್ಧಿಗೆ ಅವಶ್ಯಕ : ಡಾ.ಬಿ.ಕೆ.ಚಂದ್ರಶೇಖರ್

ಮೈಸೂರು,ನ.13:- ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳವರ 102ನೇ ಜಯಂತಿ  ಮಹೋತ್ಸವವು ಎಸ್ ಜೆಸಿಇ ಕಾಲೇಜು ಆವರಣದಲ್ಲಿ ನಡೆಯಿತು.

ಇತ್ತೀಚೆಗೆ ಜೆಎಸ್ ಎಸ್ ವಿದ್ಯಾಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ  ಈ ಮಹೋತ್ಸವದಲ್ಲಿ ಜೆಎಸ್ ಎಸ್ ನೌಕರ ವಿಭಾಗ ಹಾಗೂ ವಿದ್ಯಾರ್ಥಿ ವಿಭಾಗಗಳಿಗೆ ಸದಾಶಯ ಭರಿತ ಮೌಲ್ಯಯುತ ಪ್ರತಿಜ್ಞಾ ಸ್ವೀಕಾರ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ  ಮಾಜಿ ಸಚಿವ ಡಾ.ಬಿ.ಕೆ.ಚಂದ್ರಶೇಖರ್ ಮಾತನಾಡಿ ಜೆಎಸ್ ಎಸ್ ಮಹಾವಿದ್ಯಾಪೀಠ ಮುಂದಾಳತ್ವ ವಹಿಸಿ ನಡೆಸಿದ ಅನೇಕ ಲೋಕಕಲ್ಯಾಣ ಕಾರ್ಯಗಳನ್ನು ಸವಿಸ್ತಾರವಾಗಿ ವಿವರಿಸಿದರಲ್ಲದೇ ವಾದ ವಿವಾದ ಹಾಗೂ ಸಂವಾದಗಳು ದೇಶದ ಅಭಿವೃದ್ಧಿಗೆ ಅವಶ್ಯಕ ಎಂದು ತಿಳಿಸಿದರು. ಜಿಸಿ ಕಾಲೇಜಿನ ಹಳೆ ವಿದ್ಯಾರ್ಥಿ ಮರ್ಸಿಡಿಸ್ ಬೆನ್ಸ್ ಉಪಾಧ್ಯಕ್ಷ ಬಿ.ಪ್ರಸನ್ನ ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿದರು. ಮಹಿಳಾ ಸಬಲೀಕರಣವನ್ನು ಯಾಂತ್ರಿಕ ತಂತ್ರಜ್ಞಾನದಲ್ಲಿ ಪ್ರೋತ್ಸಾಹಿಸುವ ತ್ತಮ ವಿಚಾರವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಾವು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ವಿವರಿಸಿದರು.

ಈ ಸಂದರ್ಭ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಕುಲಪತಿ ಡಾ.ಬಿ.ಜಿ ಸಂಗಮೇಶ್ವರ್, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ತಾಂತ್ರಿಕ ನಿರ್ದೇಶಕ ಸಿ.ರಂಗನಾಥಯ್ಯ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: