ಮೈಸೂರು

ನಕಲಿ ಕೀ ಬಳಸಿ ಹಾಸ್ಟೆಲ್ ಗಳಲ್ಲಿ ಕಳವು ಮಾಡುತ್ತಿದ್ದಾತನ ಬಂಧನ

ನಕಲಿ ಕೀ ಬಳಸಿ ಹಾಸ್ಟೆಲ್ ರೂಮ್ ಗಳಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಂಗಳವಾರ ಮೈಸೂರಿನ ಕೆ.ಆರ್. ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಮಾದಪ್ಪ (23) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನಿಂದ 1,49,000 ರು. ಬೆಲೆಯ 4 ಲ್ಯಾಪ್ ಟಾಪ್, 2 ಮೊಬೈಲ್ ಫೋನ್, 1 ಪ್ರೊಜೆಕ್ಟರ್ ಹಾಗೂ ಇನ್ನಿತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆ.ಆರ್. ಠಾಣೆಯ ಪೊಲೀಸರು ಮಂಗಳವಾರ ಬೆಳಿಗ್ಗೆ ಕರ್ತವ್ಯದ ಸಮಯದಲ್ಲಿ ಉತ್ತರಾದಿ ಮಠದ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಾದಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಬಂಧಿತ ಆರೋಪಿ ಹಾಸ್ಟೆಲ್ ರೂಂಗಳಲ್ಲಿ ನಕಲಿ ಕೀ ಬಳಸಿ ಲ್ಯಾಪ್ ಟಾಪ್, ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್  ವಸ್ತುಗಳನ್ನು ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತು. ಬಂಧಿತ ವ್ಯಕ್ತಿ ಉತ್ತರಾದಿ ಮಠದ 4ನೇ ಕ್ರಾಸ್ ನಲ್ಲಿರುವ ಮಹಡಿಯ ರೂಂ ಒಂದರಲ್ಲಿ 1 ಲ್ಯಾಪ್ ಟಾಪ್, 1 ಐಪಾಡ್, 1 ಪ್ರೊಜೆಕ್ಟರ್, 1 ಜಿಯೋನಿ ಮೊಬೈಲ್, 1 ಸ್ಯಾಮ್ ಸಂಗ್ ಫೋನ್ ಕಳವು ಮಾಡಿದ್ದ. ಅಲ್ಲದೇ ಕುಂದೂರು ಮಠದ ಹಾಸ್ಟೆಲ್ ರೂಂ ನಲ್ಲಿ 2 ಲ್ಯಾಪ್ ಟಾಪ್ ಟಾಪ್ ಗಳನ್ನು ಕಳವು ಮಾಡಿದ್ದ ಎನ್ನಲಾಗಿದೆ.

Leave a Reply

comments

Related Articles

error: