ಕರ್ನಾಟಕದೇಶ

2017 ರಿಂದ ಬಿಎಸ್‍ಎನ್‍ಎಲ್ ಲೈಫ್‍ಟೈಮ್ ಕಾಲ್ ಉಚಿತ..?!

ಜಿಯೋ ಸಿಮ್ ಹಾವಳಿಯಿಂದ ಕಂಗೆಟ್ಟಿರುವ ದೇಶದ ಇತರೆ ಮೊಬೈಲ್ ನೆಟ್‍ವರ್ಕ್ ಸಂಸ್ಥೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನೂತನ ಪ್ಲಾನ್‍‍ಗಳನ್ನು ಬಿಡುಗಡೆಗೊಳಿಸಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.

ಬಿಎಸ್‍ಎನ್‍ಎಲ್ ಸಂಸ್ಥೆಯು ಗ್ರಾಹಕರಿಗೆ 2017 ನೂತನ ವರ್ಷದಿಂದ ಲೈಫ್‍ಟೈಮ್ ಉಚಿತ ಕರೆ ನೀಡುವ ಫ್ಲಾನ್‍ನನ್ನು ಈಗಾಗಲೇ ಘೋಷಿಸುವ ಮೂಲಕ ತನ್ನ ಗ್ರಾಹಕರನ್ನು ಉಳಿಸಿಕೊಂಡು ಇತರೆ ಕಂಪನಿಯ ಗ್ರಾಹಕರನ್ನು ಸೆಳೆಯಲು ರಿಲಯನ್ಸ್ ಜಿಯೋಗೆ ಸವಾಲೆಸೆದು ಜಿದ್ದಾಜಿದ್ದಿಗೆ ನಿಂತಿದೆ.

ಜಿಯೋಗಿಂತಲೂ ಅಗ್ಗದ ದರದ ನೆಟ್ ಪ್ಯಾಕ್ ಮತ್ತು ಲೈಫ್‍ಟೈಮ್ ಉಚಿತ ವಾಯ್ಸ್ ಕಾಲ್ ಸೌಲಭ್ಯವನ್ನು 2ಜಿ ಮತ್ತು 3ಜಿ ಗ್ರಾಹಕರಿಗೆ ನೀಡಲು ತೀರ್ಮಾನಿಸಿದೆ.

ಷರತ್ತು: ಬಿಎಸ್‍ಎನ್‍ಎಲ್ ಘೋಷಿಸಿರುವ ಈ ಸವಲತ್ತು ಪಡೆಯಲು ಮನೆಯಲ್ಲಿ ಬ್ರಾಡ್‍ಬ್ಯಾಂಡ್ ಸೌಲಭ್ಯವಿರಬೇಕು. ಹೊರಹೋಗುವ ಕರೆಗಳನ್ನು ಲ್ಯಾಂಡ್‍ಲೈನ್ ನೆಟ್‍ವರ್ಕ್‍ನಲ್ಲಿ ನಿರ್ವಹಿಸಬೇಕು. ಗ್ರಾಹಕರು ನೆಟ್‍ಪ್ಯಾಕ್ ಹಾಕಿಸಿಕೊಂಡರೆ ಸಾಕು ಟಾಕ್‍ಟೈಮ್ ರಿಚಾರ್ಜ್ ಅವಶ್ಯಕತೆ ಇಲ್ಲ.

ಈಗಾಗಲೇ ರಿಲಯನ್ಸ್ ಜಿಯೋ ಸಿಮ್ ಪಡೆದವರು ಈ ವರ್ಷಾಂತ್ಯದವರೆಗೂ ಉಚಿತ ನೆಟ್ ಪ್ಯಾಕ್ ಹಾಗೂ ಕರೆಗಳನ್ನು ನೀಡಿದ್ದು ಈ ಕೊಡುಗೆಗೆ ಯುವಜನಾಂಗವು ಮಾರು ಹೋಗಿದ್ದು ಹಗಲಿರುಳು ಎನ್ನದೇ ಸರದಿ ಸಾಲಿನಲ್ಲಿ ನಿಂತು ಸಿಮ್ ಖರೀದಿಸಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ.

Leave a Reply

comments

Related Articles

error: