ಕರ್ನಾಟಕ

ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳ ಆಯ್ಕೆ

ಸೋಮವಾರಪೇಟೆ,ನ.13-ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮೋಹನ್ ಬೋಪಣ್ಣ, ಕಾರ್ಯದರ್ಶಿಯಾಗಿ ಎಸ್.ಸಿ. ಪ್ರಕಾಶ್ ಆಯ್ಕೆಯಾಗಿದ್ದಾರೆ.

ಎಸ್.ಸಿ.ಪ್ರಕಾಶ್

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಬಿ.ಎಂ. ಲವ, ಕೆ.ಪಿ. ಬಸಪ್ಪ, ಖಜಾಂಚಿಯಾಗಿ ಎನ್.ಎನ್. ರಮೇಶ್ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಕೆ.ಎನ್. ಪಾಪಯ್ಯ, ಕೆ.ಟಿ. ರಾಜಶೇಖರ್, ಡಿ.ಪಿ. ನಿಂಗಪ್ಪ, ಬಿ.ಎಸ್.ಸುರೇಶ್, ಪ್ರಕಾಶ್ ಬೆಳ್ಳಿಯಪ್ಪ, ಪೂವಮ್ಮ, ವನಜಾಕ್ಷಿ, ಎಸ್.ಎಂ. ಡಿಸಿಲ್ವ, ಕೆ.ಎನ್. ಸತೀಶ್, ಎನ್.ಎನ್. ಬೋಪಣ್ಣ, ಬಿ.ಎಸ್. ಅನಂತರಾಮ್, ಎ.ಆರ್. ಕುಶಾಲಪ್ಪ, ಕೆ.ಈ. ಸುಲೈಮಾನ್, ಡಿ.ಸಿ. ರಾಜು, ಪಿ.ಸಿ. ಮಾದಪ್ಪ, ಎಚ್.ಆರ್. ಸುರೇಶ್, ಕೆ.ಟಿ. ಪರಮೇಶ್, ಸಿ.ಕೆ. ಸತೀಶ್, ಅನಿತಾ ಅರುಣ್‍ಕುಮಾರ್, ವರಲಕ್ಷ್ಮೀ ಸಿದ್ದೇಶ್ವರ್, ಎಸ್.ಪಿ. ಕೃಪಾಲ್ ಆಯ್ಕೆಯಾದರು.

ವಿಶೇಷ ಆಹ್ವಾನಿತರಾಗಿ ಬಿ.ಎಂ. ಸುರೇಶ್, ಬಿ.ಡಿ. ಮಂಜುನಾಥ್, ಎಸ್.ಎನ್. ಸೋಮಶೇಖರ್ ಆಯ್ಕೆಯಾದರು. ಸಲಹೆಗಾರರಾಗಿ ಎಸ್.ಜಿ.ಮೇದಪ್ಪ, ಎಸ್.ಬಿ. ಭರತ್‍ಕುಮಾರ್, ಕೆ.ಎಂ. ಲೋಕೇಶ್, ಎ.ವಿ. ನೀಲಕಂಠಪ್ಪ, ಬಿ.ಎಸ್. ಸಿದ್ದಪ್ಪ, ಎಂ.ಡಿ. ರಾಜಪ್ಪ, ಕೆ.ಎಸ್. ರಾಮಚಂದ್ರ ಹಾಗು ಪೂಣಚ್ಚ ಆಯ್ಕೆಯಾದರು. (ವರದಿ-ಕೆಸಿಐ, ಎಂ.ಎನ್)

 

Leave a Reply

comments

Related Articles

error: