ಕರ್ನಾಟಕಪ್ರಮುಖ ಸುದ್ದಿ

ಚಿನ್ನ ಖರೀದಿಗೆ ಪಾನ್ ಕಾರ್ಡ್: 2.25 ಲಕ್ಷಕ್ಕಿಂತ ಅಧಿಕ ಠೇವಣಿಗೆ ತೆರಿಗೆ ಕಡ್ಡಾಯ

ದೇಶದ ಆರ್ಥಿಕತೆಯ ಮೇಲೆ ಸ್ಥಿರತೆ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಳೆದ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ದಿಢೀರನೇ ದಿಟ್ಟ ಹೆಜ್ಜೆಯನ್ನಿರಿಸಿ ಬೃಹತ್ ಮೊತ್ತದ ನೋಟುಗಳನ್ನು ಚಲಾವಣೆಯನ್ನು ಏಕಾಏಕಿ ನಿಲ್ಲಿಸಿ ಹಿಂಪಡೆಯಲು ಶುರುವಿಟ್ಟಿದ್ದರಿಂದ ಗ್ರಾಹಕರು ಬ್ಯಾಂಕ್‍ಗಳ ಮುಂದೆ ಕಿಲೋಮೀಟರ್ ಗಟ್ಟಲೇ  ಸರದಿ ಸಾಲಿನಲ್ಲಿ ನಿಂತು ಹಣವನ್ನು ಜಮಾವಣೆ ಮಾಡಿದರು.

2.5 ಲಕ್ಷ ರೂ.ಗಿಂತ ಹೆಚ್ಚು ಹಣ ಜಮಾ ಮಾಡುವವರಿಗೆ ತೆರಿಗೆ ಬಿಸಿ ತಟ್ಟುತ್ತಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ ಕೇಂದ್ರ ಸರ್ಕಾರವು 500 ಮತ್ತು 1000 ರು. ಮುಖಬೆಲೆಯ ಹಳೆ ನೋಟುಗಳ ಚಲಾವಣೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಕಪ್ಪು ಹಣದ ಚಲಾವಣೆ ನಿಯಂತ್ರಿಸಲು ಹಾಗೂ ತೆರಿಗೆ ವಂಚಿತರನ್ನು ಪತ್ತೆಹಚ್ಚಲು ಸಹಾಯವಾಯಿತು ಎನ್ನುವುದು ತಜ್ಞರ ಅಭಿಪ್ರಾಯ.

ತೆರಿಗೆ : 2.5 ಲಕ್ಷಕ್ಕಿಂತ ಹೆಚ್ಚು ಹಣ ಕಟ್ಟುವ ಗ್ರಾಹಕರಿಗೆ ತೆರಿಗೆ ಬಿಸಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಐನೂರು ಮತ್ತು ಸಾವಿರ ಮುಖಬೆಲೆಯ ಹಳೆ ನೋಟುಗಳನ್ನು ಠೇವಣಿ ಇಟ್ಟಲ್ಲಿ ತೆರಿಗೆ ವಂಚನೆ ದಂಡಸಂಹಿತೆ ಪ್ರಕಾರ ಶೇ.200ರಷ್ಟು ದಂಡ ವಿಧಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಈ ಬಗ್ಗೆ ಕೇಂದ್ರ ತೆರಿಗೆ ಇಲಾಖೆಗೆ ಬ್ಯಾಂಕ್ ಮೂಲಕ ಮಾಹಿತಿ ರವಾನೆಯಾಗುವುದು. ಇದರಿಂದ ಖಾತೆದಾರರ ಘೋಷಿತ ಆದಾಯದ ಲೆಕ್ಕಾಚಾರ ಲಭ್ಯವಾಗುವುದು. ನ.10ರಿಂದ ಡಿ.30 ರ ವರೆಗೆ ನಗದು ಠೇವಣಿಗೆ ಅವಕಾಶವಿದೆ. ನಗದು ಠೇವಣಿ ಮತ್ತು ಘೋಷಿತ ಆದಾಯದ ಲೆಕ್ಕಾಚಾರ ತಾಳೆಯಾಗದಿದ್ದಲ್ಲಿ ಅದನ್ನು ತೆರಿಗೆ ವಂಚನೆ ಎಂದು ಪರಿಗಣಿಸಿ ಸೆ. 270(ಎ) ಅನ್ವಯ ಶೇ. 200ರಷ್ಟು ತೆರಿಗೆ ಪಾವತಿಸಬೇಕಾಗುವುದು. ಗೃಹಿಣಿಯರು, ರೈತರು, ಹಿರಿಯ ನಾಗರೀಕರು ಅಥವಾ ಜನಸಾಮಾನ್ಯರು 2.25 ಲಕ್ಷ ರೂ ಠೇವಣಿ ಇಡಲು ಅಥವಾ ಹೊಸ ನೋಟಿಗೆ ಬದಲಾಯಿಸಿಕೊಳ್ಳಲು ಯಾವ ತೊಡಕೂ ಇಲ್ಲ.

ಚಿನ್ನ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ: ಹಳೆ ನೋಟುಗಳ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲ ಆದಾಯ ತೆರಿಗೆ ವಂಚಿತರು ಹಾಗೂimages ಕಪ್ಪು ಹಣ ದಾಸ್ತಾನುದಾರರು ಹಣವನ್ನು ಚಿನ್ನದಲ್ಲಿ ಹೂಡಲು ಮುಂದಾಗಿದ್ದು ಚಿನ್ನದ ವ್ಯಾಪಾರಿಗಳು ನಿಗದಿಗಿಂತ ಅಧಿಕ ಚಿನ್ನ ಮಾರಾಟ ಮಾಡಿದರೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜ್ಯುವೆಲರಿ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದ ಚಿನ್ನದ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಮಾರಾಟವಾದ ಚಿನ್ನ ಮತ್ತು ಸಂಗ್ರಹವಾದ ಮೊಬಲಗನ್ನು ತಾಳೆ ಮಾಡಲಾಗುವುದು. ವ್ಯತ್ಯಾಸ ಕಂಡು ಬಂದರೆ ಅಂಗಡಿ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎನ್ನುವುದು ಅಧಿಕಾರಿಗಳ ಖಡಕ್ ಎಚ್ಚರಿಕೆ.

Leave a Reply

comments

Related Articles

error: