ಮೈಸೂರು

ಅಲೆಮಾರಿ ಜನಾಂಗದವರ ಮೇಲೆ ಪೊಲೀಸರ ದೌರ್ಜನ್ಯ ಆರೋಪಿಸಿ : ಪ್ರತಿಭಟನೆ

ಮೈಸೂರು,ನ.14:- ಅಲೆಮಾರಿ ಜನಾಂಗದವರ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ಅಲೆಮಾರಿಗಳು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ ಘಟನೆ ನಡೆದಿದೆ.

ಮೈಸೂರಿನ ಏಕಲವ್ಯ ನಗರದಲ್ಲಿರುವ ಅಲೆಮಾರಿಗಳನ್ನು  ಒಕ್ಕಲೆಬ್ಬಿಸಲು  ಯತ್ನ ನಡೆಸಿದ್ದು, ಒಪ್ಪದಿರುವುದಕ್ಕೆ ಪುರುಷರ ಮೇಲೆ ಪೊಲೀಸರು ಪೌರುಷ ತೋರಿಸಿದ್ದಾರೆ. ದೌರ್ಜನ್ಯದಿಂದ ನೊಂದ ಅಲೆಮಾರಿ ಜನಾಂಗದ ಮಹಿಳೆಯರು ಚಿಕ್ಕ ಮಕ್ಕಳ ಸಮೇತ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ನ್ಯಾಯ ಸಿಗುವ ತನಕ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: