ದೇಶ

ಮೋದಿ ನಡೆಸಿದ ಆರ್ಥಿಕ ಕ್ರಾಂತಿಗೆ ಅನಿಲ್ ಬೋಕಿಲ್ ಸಲಹೆ ಕಾರಣ

500 ಮತ್ತು 1000 ರು. ನೋಟುಗಳ ಚಲಾವಣೆ ನಿಷೇಧದಿಂದ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಭಾರೀ ಸಮರ ಸಾರಬಹುದೆಂದು ಮೋದಿ ಅವರಿಗೆ ಸಲಹೆ ನೀಡಿದವರು ಔರಂಗಾಬಾದಿನ ಓರ್ವ ಚಾರ್ಟೆಡ್ ಅಕೌಂಟೆಂಟ್.

ಪುಣೆಯ ‘ಅರ್ಥಕ್ರಾಂತಿ ಸಂಸ್ಥಾನ’ ಸಮೂಹದ ಸದಸ್ಯರಾಗಿರುವ ಅನಿಲ್ ಬೋಕಿಲ್ ಎಂಬ ಚಾರ್ಟೆಡ್ ಅಕೌಂಟೆಂಟ್ ಹಲವು ದಿನಗಳ ಹಿಂದೆಯೇ ಮೋದಿ ಅವರಿಗೆ ಕಪ್ಪುಹಣ ಹೇಗೆ ನಿಯಂತ್ರಣ ಮಾಡಬಹುದು ಎಂಬ ಬಗ್ಗೆ ಸಲಹೆ ನೀಡಿದ್ದರು. ಈ ವಿಚಾರವನ್ನು ಬೋಕಿಲ್ ಅವರ ಸಹದ್ಯೋಗಿ ಅಶುತೋಷ್ ಫಾಲ್ಕೆ ಅವರು ಸ್ಪಷ್ಟಪಡಿಸಿದ್ದಾರೆ. “ಬೋಕಿಲ್ ಅವರು ತುಂಬಾ ದಿನಗಳ ಹಿಂದೆ ಪ್ರಧಾನಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ಕೇವಲ ಎಂಟು ನಿಮಿಷಗಳ ಸಮಯಾವಕಾಶ ನೀಡಿದ್ದರು. ಬೋಕಿಲ್ ಅವರು ತಮ್ಮ ಕ್ರಾಂತಿಕಾರಕ ಚಿಂತನೆಗಳನ್ನು ಮಂಡಿಸುತ್ತಾ ಹೋದಂತೆ ಸಮಯಾವಕಾಶ ಮೀರಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಯಿತು” ಎಂದು ತಿಳಿಸಿದ್ದಾರೆ.

ಕೊನೆಗೂ ಮೋದಿ ಅವರು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ 500 ಮತ್ತು 1000 ರು. ನೋಟುಗಳ ಚಲಾವಣೆ ಮತ್ತು ಮುದ್ರಣವನ್ನು ನಿಷೇಧಿಸಿದ್ದಾರೆ. ಈ ಆರ್ಥಿಕ ಕ್ರಾಂತಿಯು ದೇಶಾದ್ಯಂತ ತಲ್ಲಣ ಮೂಡಿಸಿದ್ದು, ಕಾಳಧನಿಕರ ನಿದ್ದೆಗೆಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

Leave a Reply

comments

Related Articles

error: