ಪ್ರಮುಖ ಸುದ್ದಿಮೈಸೂರು

ಲಾರಿ ಮತ್ತು ಟೆಂಪೋ ಟ್ರಾವಲರ್ ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಮೈಸೂರು,ನ.14:- ಮೈಸೂರು ಹುಣಸೂರು ರಸ್ತೆಯಲ್ಲಿ  ಲಾರಿ ಮತ್ತು ಟೆಂಪೋ ಟ್ರಾವಲರ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಮಂಗಳೂರಿನ ಅಬ್ದುಲ್ ಹಮೀದ್ (47),ಮಹಮದ್ ಇಕ್ಬಾಲ್ (37) ಹಾಗೂ ಶೇಕ್ ಹಕೀಬ್(11)ಎಂದು ಗುರುತಿಸಲಾಗಿದೆ. ಇವರು ಮೂವರು ಒಂದೇ ಕುಟುಂಬದವರು ಎನ್ನಲಾಗಿದೆ. 14 ಮಂದಿಗೆ ಗಾಯಗಳಾಗಿದ್ದು, ಹುಣಸೂರು ಬಳಿ ಇರುವ ಬಸರಿಕಟ್ಟೆ ಬಳಿ ಘಟನೆ  ನಡೆದಿದೆ. ಟೆಂಪೋ ಟ್ರಾವಲರ್ ನಲ್ಲಿ ಕುಟುಂಬ ಮಂಗಳೂರಿನಿಂದ ಊಟಿಗೆ ತೆರಳುತ್ತಿತ್ತು. ಲಾರಿಯನ್ನು  ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಹುಣಸೂರು ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: