ಮೈಸೂರು

ಬೈಕ್ ಮತ್ತು ಅಪೆ ಆಟೋ ನಡುವೆ ಡಿಕ್ಕಿ : ಎಂಟು ಮಂದಿಗೆ ಗಾಯ

ಮೈಸೂರು,ನ.14:- ಬೈಕ್ ಮತ್ತು ಅಪೆ ಆಟೋ ನಡುವೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಗಾಯಗೊಂಡ ಘಟನೆ ಟಿ.ನರಸೀಪುರ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಎಂಟು ಮಂದಿ ಮಹಿಳೆಯರು ಅಪೆ ಆಟೋವನ್ನೇರಿ ಸಾಯಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೊರಟಿದ್ದರು. ಇದೇ ವೇಳೆ ಎದುರಿನಿಂದ ಬಂದ ಬೈಕ್ ನಲ್ಲಿರುವ ದಂಪತಿಗಳಿಗೆ ಆಟೋ ಡಿಕ್ಕಿ ಯಾದರೆ ಎಂಬ ಕಾರಣಕ್ಕೆ ಆಟೋ ಚಾಲಕ ತನ್ನ ವಾಹನ ವನ್ನು ಬದಿಗೆ ತಂದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಆಟೋ ನೆಲಕ್ಕುರುಳಿದೆ. ಬೈಕ್ ಗೂ ಡಿಕ್ಕಿ ಯಾಗಿದೆ. ಇದರಿಂದ ಆಟೋದಲ್ಲಿದ್ದ ಗೀತಾ, ರತ್ನಾ, ಶಿವಮ್ಮ ಎಂಬವರ ತಲೆಗೆ ಗಾಯವಾಗಿದ್ದು ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನಿಗೂ ಗಾಯವಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: