ಮೈಸೂರು

ಬಿಜೆಪಿ ಮಹಿಳಾ ಮೋರ್ಚಾದಿಂದ `ಮತದಾರರ ನಡಿಗೆ ಬೂತ್ ಕಡೆಗೆ’ ಕಾರ್ಯಾಗಾರ

ಮೈಸೂರು,ನ.14- ಭಾರತೀಯ ಜನತಾ ಪಾರ್ಟಿ ಕೃಷ್ಣರಾಜ ಕ್ಷೇತ್ರ ಮಹಿಳಾ ಮೋರ್ಚಾದ ವತಿಯಿಂದ ಮಂಗಳವಾರ ಗನ್ ಹೌಸ್ ಬಳಿಯಿರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ `ಮತದಾರರ  ನಡಿಗೆ ಬೂತ್ ಕಡೆಗೆ’ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಕೃಷ್ಣರಾಜ ಕ್ಷೇತ್ರದ ಎಲ್ಲ ಬೂತ್ ಗಳಿಂದ ಇಬ್ಬರು ಮಹಿಳೆಯರು ಆಗಮಿಸಿದ್ದು, ಆಯಾ ಬೂತಿನಲ್ಲಿ ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ನಮುನೆ ಸಂಖ್ಯೆ  ೬,೭,೮,೮ ಎ ಗಳನ್ನೂ ಯಾವುದಕ್ಕೆ ಉಪಯೋಗಿಸಬೇಕು ಹಾಗೂ ಹೇಗೆ ಉಪಯೋಗಿಸಬೇಕು ಮತ್ತು ಜನಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದಕ್ಕೆ ಇರುವ ಕ್ರಮಗಳ ಬಗ್ಗೆ  ಮಾಹಿತಿ ನೀಡುವ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಫ್ಯಾಷನ್ ವೀಕ್ ಸಂಸ್ಥಾಪಕರಾದ ಜಯಂತಿ ಬಲ್ಲಾಳ್, ಮಾಜಿ ಸಚಿವ ಎಸ್.ಎ.ರಾಮದಾಸ್, ಜಿಎಸ್ಎಸ್ ಸಂಸ್ಥೆಯ ಮಾಲೀಕ ಶ್ರೀ ಹರಿ, ಲೋಕೇಶ್, ನಗರಪಾಲಿಕೆ ಸದಸ್ಯ ಹಾಗೂ ಬಿಜೆಪಿ   ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಬಿ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವಿದ್ಯಾಅರಸ್, ಮಹಿಳಾ ಮೋರ್ಚಾ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ನೂರ್ ಫಾತಿಮಾ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: