ಮೈಸೂರು

ನ.15 ರಿಂದ ಮೈಸೂರಿನಲ್ಲಿ ಖಾದಿ ಉತ್ಸವ

ಮೈಸೂರು, ನ. 14 : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ವಲಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ನ.15 ರಿಂದ ಡಿ.4ರವರೆಗೆ ‘ಖಾದಿ ಉತ್ಸವ’ ಜೆ.ಕೆ.ಮೈದಾನದಲ್ಲಿ ನಡೆಯಲಿದೆ.

ಉತ್ಸವವನ್ನು ಅಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡುವರು, ಖಾದಿ ಪಿವಿಲಿಯನ್ ಗೆ ಸಚಿವ ತನ್ವೀರ್ ಸೇಠ್, ಗ್ರಾಮೋದ್ಯೋಗ್ ಪೆವಿಲಿಯನ್ ಗೆ ಸಚಿವ ಡಾ.ಗೀತ ಮಹದೇವ ಪ್ರಸಾದ್ ಉದ್ಘಾಟಿಸುವರು ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಿಂದಲೂ ನೇಕಾರರು ಉತ್ಸವದಲ್ಲಿ ಭಾಗಿಸಲಿದ್ದು, 120 ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು, ಸರ್ಕಾರದ ನಿರ್ದೇಶನದ ಪ್ರಕಾರ ಸ್ಥಳೀಯರಿಗೆ ಮೊದಲ ಆಧ್ಯತೆ ಇರಲಿದೆ, 20 ದಿನಗಳ ಉತ್ಸವದಲ್ಲಿ 1.5 ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಪ್ರತಿ ವರ್ಷ ಜಿಲ್ಲಾ, ರಾಜ್ಯ, ವಲಯ ಹಾಗೂ ರಾಷ್ಟ್ರೀಯಮಟ್ಟದ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ನೇಕಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಉತ್ಸವದ ಉದ್ದೇಶ. ಜಮ್ಮು ಕಾಶ್ಮೀರ, ಆಂದ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ತಮಿಳುನಾಡು, ಪಾಂಡಿಚೇರಿ, ಮುಂಬೈ, ಗುಜರಾತ್ ನಿಂದ ನೇಕಾರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಂಡಳಿ ನಿರ್ದೇಶಕಿ ಲತಾ ಮೋಹನ್, ಆಡಳಿತ ವಿಭಾಗದ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಣ್ಣಪ್ಪ, ಜಿಲ್ಲಾ ಖಾದಿ ಮಂಡಳಿ ಅಧಿಕಾರಿ ಸತ್ಯಪ್ರೇಮ ಕುಮಾರಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: