
ಮೈಸೂರು
ವಿಶೇಷ ಚೇತನ ಮಕ್ಕಳಿಗಾಗಿ`ತಾರೆಜಮೀನ್ ಪರ್’ಚಿತ್ರಕಲಾ ಸ್ಪರ್ಧೆಆಯೋಜನೆ
ಮೈಸೂರು,ನ.14:- ರೌಂಡ್ಟೇಬಲ್ ಇಂಡಿಯಾದ ಮೈಸೂರು ಶಾಖೆಯಾದ ಅಮಿಟಿರೌಂಡ್ಟೇಬಲ್ 156 ಮತ್ತು ಮೈಸೂರು ಅಮಿಟಿ ಲೇಡಿಸ್ ಸರ್ಕಲ್ 108 ಇಂದು ಜಂಟಿಯಾಗಿ ವಿಶೇಷ ಚೇತನ ಮಕ್ಕಳಿಗಾಗಿ`ತಾರೆಜಮೀನ್ ಪರ್’ಚಿತ್ರಕಲಾ ಸ್ಪರ್ಧೆಆಯೋಜಿಸುವ ಮೂಲಕ ಮಕ್ಕಳ ದಿನವನ್ನುಆಚರಿಸಿತು.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದೇಶ ಚೇರ್ಮನ್ ಟ್. ಮಯೂರ್ ಶಾಅವರು ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಾಲೆಂಡ್ ಮತ್ತು ಫ್ರಾನ್ಸ್ನಿಂದ ಟ್ಯಾಬ್ಲರ್ಗಳು ಹಾಜರಿದ್ದರು. ಈ ಸಂದರ್ಭಮಾತನಾಡಿದ ಮೈಸೂರು ಅಮಿಟಿರೌಂಡ್ಟೇಬಲ್ ಇಂಡಿಯಾದ ಅಧ್ಯಕ್ಷ ಟೇಬ್ಲರ್ ಅನಿ ರುದ್ರಂಗ ಪ್ರತಿಯೊಂದು ಮಗುವು ವಿಶೇಷವಾಗಿದ್ದು, ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತವೆ.ವಿಶೇಷ ಚೇತನ ಮಕ್ಕಳಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂಬುದೇ ತಾರೆ ಜಮೀನ್ ಪರ್ಆಯೋಜಿಸುವುದರ ಮೂಲ ಉದ್ದೇಶ ಎಂದು ತಿಳಿಸಿದರು. ಪ್ರತಿ ಮಗುವೂ ಮಿನುಗುವ ತಾರೆಯೆ, ಅವರ ಜೀವನ ಖುಷಿ ಹಾಗೂ ರಂಗಿನಿಂದ ತುಂಬಿ ಮಿನುಗುವಂತಾಗಲಿ ಎಂಬ ಉದ್ದೇಶದಿಂದ ರೌಂಡ್ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ಇಂಡಿಯಾಜಂಟಿಯಾಗಿ ವಿಶೇಷ ಮಕ್ಕಳಿಗಾಗಿ ದೇಶದ70ವಿವಿಧ ನಗರಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಸುಮಾರು 5,000 ಮಕ್ಕಳು ಭಾಗವಹಿಸಿದ್ದರು. ಮೈಸೂರಿನಲ್ಲಿಯೇ ವಿವಿಧ 4 ಸಂಸ್ಥೆಗಳಿಗೆ ಸೇರಿದ ಸುಮಾರು 140ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕದಲ್ಲಿ ಮರ್ಸಿ ಸ್ಕೂಲ್ ವಿದ್ಯಾರ್ಥಿಗಳಾದ ನಾಗರಾಜ್ ಜಿ.ಹೆಚ್ ಪ್ರಥಮ, ಅನಿತಾ ದ್ವಿತೀಯ, ಚೈತನ್ಯ ತೃತೀಯ ಸ್ಥಾನಗಳನ್ನು, ಮಾಧ್ಯಮಿಕದಲ್ಲಿ ರಾಜು ಎಂ, ಪ್ರಥಮ, ರವಿತೇಜ ದ್ವಿತೀಯ, ದರ್ಶ ಡಿ.ಆರ್ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ ಸಾಯಿರಂಗ ಶಾಲೆಯ ಗೌತಮ್ ಪ್ರಥಮ,ಅದೇ ಶಾಲೆಯ ಯುವರಾಜ್ ಎ.ಎನ್, ದ್ವಿತೀಯ, ಪುಟ್ಟ ವೀರಮ್ಮ ಶಾಲೆಯ ಮೊನಿಶಾ ಯು ತೃತೀಯ ಸ್ಥಾನವನ್ನು ಪಡೆದಿದ್ದಾರೆ. (ಎಸ್.ಎಚ್)