ಸುದ್ದಿ ಸಂಕ್ಷಿಪ್ತ

ನ. 27-28 : ರಾಜ್ಯ ಮಟ್ಟದ ಮಹಿಳಾ ವಿಜ್ಞಾನ ಸಮಾವೇಶ

ಮೈಸೂರಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾಗಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಸಭಾಂಗಣದಲ್ಲಿ ನವೆಂಬರ್ 27 ಮತ್ತು 28ರಂದು ರಾಜ್ಯ ಮಟ್ಟದ ಮಹಿಳಾ ವಿಜ್ಞಾನ ಸಮಾವೇಶವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಪ್ರತಿ ಜಿಲ್ಲೆಯಿಂದ ತಲಾ ಇಬ್ಬರಂತೆ ಆಯ್ದ ಮಹಿಳಾ ಪ್ರತಿನಿಧಿಗಳು, ಸ್ತ್ರೀಶಕ್ತಿ ಕಾರ್ಯಕರ್ತರು, ಶಿಕ್ಷಕಿಯರು, ಉಪನ್ಯಾಸಕಿಯರು, ಮಹಿಳಾಸಂಘಟನೆಗಳ ಪದಾಧಿಕಾರಿಗಳು ಹಾಗೂ ಆಯ್ದ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಸಮಾವೇಶದ ಅಂಗವಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಮಹಿಳಾ ವಿಜ್ಞಾನಿಗಳು, ವಿಜ್ಞಾನ ಸಂವಹನಕಾರರು, ಮಾಧ್ಯಮ ತಜ್ಞರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಆಸಕ್ತಿ ಹೊಂದಿರುವ ಮಹಿಳಾ ಪ್ರತಿನಿಧಿಗಳು ತಮ್ಮ ಸ್ವವಿವರಗಳೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070, ದೂ.ಸಂ.080-26718939 ನ್ನು ಸಂಪರ್ಕಿಸಬಹುದು. ಯಾವುದೇ ಪ್ರಯಾಣದ ವೆಚ್ಚ ನೀಡಲಾಗುವುದಿಲ್ಲ. ಎರಡೂ ದಿನಗಳಂದು ಊಟೋಪಚಾರ ವ್ಯವಸ್ಥೆ ಸೇರಿದಂತೆ ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಗರಿಷ್ಠ ಜನರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Leave a Reply

comments

Related Articles

error: