
ಕರ್ನಾಟಕಪ್ರಮುಖ ಸುದ್ದಿ
ಕುಮಟಾ -ಗೋಕರ್ಣ ನಡುವೆ ಮಿರ್ಜಾನ ಗ್ರಾಮದ ರೈಲು ನಿಲ್ದಾಣ ಇನ್ನೊಂದು ವರ್ಷದಲ್ಲಿ ಲೋಕಾರ್ಪಣೆ : ಬಿ.ಎಸ್.ಯಡಿಯೂರಪ್ಪ
ರಾಜ್ಯ(ಉತ್ತರಕನ್ನಡ)ನ.14:- ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕುಮಟಾ ಮತ್ತು ಗೋಕರ್ಣ ನಡುವೆ ಮಿರ್ಜಾನ ಗ್ರಾಮದ ರೈಲು ನಿಲ್ದಾಣ ಇನ್ನೊಂದು ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಪರಿವರ್ತನಾ ರ್ಯಾಲಿಯ ಸಮಾವೇಶದಲ್ಲಿ ಪಾಲ್ಗೊಂಡ ಬಿಎಸ್ ವೈ ಮಾತನಾಡಿ 2017ರ ಜನವರಿಯಲ್ಲಿ ಕೇಂದ್ರ ಸರ್ಕಾರ ಆಡಿಕೆಯ ಕನಿಷ್ಟ ಆಮದು ಬೆಲೆಯನ್ನು 162 ರೂ. ಗಳಿಂದ 251 ರೂ.ಗಳಿಗೆ ಏರಿಕೆ ಮಾಡಿದೆ. ಕುಮಟಾ ನಗರದಲ್ಲಿ ಅಕ್ಟೋಬರ್ 31ರಿ0ದ ಲೈಫ್ ಲೈನ್ ಎಕ್ಸ್ ಪ್ರೆಸ್ (ಸ0ಚಾರಿ ರೈಲು ಚಿಕಿತ್ಸಾಲಯ) ನವೆಂಬರ್ 19ರ ತನಕ ಸೇವೆ ನೀಡಲಿದೆ. ನಮ್ಮ ಅಧಿಕಾರಾವಾಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳಿಗೆ 1,000 ಕೋಟಿ ಖರ್ಚು ಮಾಡಿದ್ದೇವೆ. ಕುಮಟಾದಲ್ಲಿ ಸರ್ಕಾರಿ ಕಾಲೇಜು ಪ್ರಾರಂಭಿಸಿದ್ದೇವೆ. ಕುಮಟಾ ಅಭಿವೃದ್ಧಿಗೆ ಆಗಿನ ಬಿಜೆಪಿ ಸರ್ಕಾರ ನೀಡಿದ್ದ 5 ಕೋಟಿ ಅನುದಾನವನ್ನು ಜೆಡಿಎಸ್ ನಿಯಂತ್ರಣದ ಪುರಸಭೆ ದುರ್ಬಳಕೆ ಮಾಡಿಕೊಂಡಿತು.ಮತ್ಸ್ಯಾಶ್ರಯ’ ಮನೆಗಳನ್ನು ನೂರಾರು ಸಂಖ್ಯೆಯಲ್ಲಿ ವಿತರಿಸಲಾಗುತ್ತಿತ್ತು ಎಂದು ತಿಳಿಸಿದರು. ಬಿಜೆಪಿ ಯಾವಾಗಲೂ ಅಭಿವೃದ್ಧಿ ಪರ ನಿಲ್ಲುತ್ತಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಜನದನಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಸಂಸತ್ ಸದಸ್ಯ, ಯುವನಾಯಕ ಅನಂತ್ ಕುಮಾರ್ ಹೆಗಡೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದೆ. ಜನಧನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು 1.1 ಕೋಟಿ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಭಾರತ್ ಅನ್ವಯ, ಕೇಂದ್ರ ಸರ್ಕಾರ ರಾಜ್ಯಕ್ಕೆ 419.5 ಕೋಟಿ ನೀಡಿದೆ ಎಂದರು.
ಈ ಸಂದರ್ಭ ಸಚಿವ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಸೇರಿದಂತೆ ಬಿಜೆಪಿಯ ಪ್ರಮುಖರು ಪಾಲ್ಗೊಂಡಿದ್ದರು. (ಎಸ್.ಎಚ್)