ಕರ್ನಾಟಕ

ಸ್ವಾಧೀನ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿದ್ದನ್ನು ಪ್ರಶ್ನಿಸಿದ ಜಿ.ಪಂ.ಸದಸ್ಯರಿಗೆ ಉಪವಿಭಾಗಾಧಿಕಾರಿ ಧಮಕಿ : ಪ್ರತಿಭಟನೆ

ರಾಜ್ಯ(ಮಂಡ್ಯ)ನ.14:-  ಭೂಸ್ವಾಧೀನ ಪರಿಹಾರ ನೀಡುವ ಸಂಬಂಧ ನಡೆಯುತ್ತಿದ್ದ ಸಭೆಯಲ್ಲಿ ರೈತರಿಗೆ ಏನೂ ಹೇಳದೇ ಸ್ವಾಧೀನ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿದ್ದನ್ನು ಪ್ರಶ್ನಿಸಿದ ಜಿ.ಪಂ.ಸದಸ್ಯ ಹಾಗೂ ಹಿರಿಯ ವಕೀಲ ಬಿ.ಎಲ್.ದೇವರಾಜು ಅವರಿಗೆ ನೀವು ಯಾವ ಜನಪ್ರತಿನಿಧಿಯಾದರೆ ನನಗೇನ್ರಿ ಸುಮ್ಮನೆ ಹೊರಗೆ ನಡೀರಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಯಶೋಧ ಅವರು ಧಮಕಿ ಹಾಕಿದ ಘಟನೆ ನಡೆಯಿತು.

ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆ ಬೈಪಾಸ್ ರಸ್ತೆಯನ್ನು ನಿರ್ಮಿಸಲು ತಾಲೂಕಿನ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವ ಸಂಬಂಧ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಲು ಬೆಡದಹಳ್ಳಿ, ಶೆಟ್ಟನಾಯಕನಕೊಪ್ಪಲು, ವಳಗೆರೆ ಮೆಣಸ, ಬೊಮ್ಮನಾಯಕನಹಳ್ಳಿ, ಅಗ್ರಹಾರಬಾಚಹಳ್ಳಿ, ಚಿಕ್ಕೋನಹಳ್ಳಿ, ಚಿಕ್ಕೋಸಹಳ್ಳಿ, ಹೊಸಹೊಳಲು ಕೊಪ್ಪಲು, ಬಿಲ್ಲರಾಮನಹಳ್ಳಿ, ವ್ಯಾಪ್ತಿಯ ರೈತರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ಕರೆಯಲಾಗಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಯಶೋಧಾ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ನಿಮ್ಮ ಪ್ರಶ್ನೆಗೆ ನಾನು ಉತ್ತರನೀಡಬೇಕಿಲ್ಲ, ನೀವು ಜನಪ್ರತಿನಿಧಿಯಾದರೆ ನನಗೇನು ಹೊರಗೆ ನಡೀರಿ ಎಂಬ ಮಾತಿಗೆ ಕೆರಳಿದ ದೇವರಾಜು ರೈತರೊಂದಿಗೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ರತ್ನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಂತ್ರಸ್ತ ರೈತರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: