ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಭಾವೈಕ್ಯತೆ ಶಾಂತಿ ಸಂದೇಶ ಸಭೆ

ಮೈಸೂರು, ನ. 14 : ಮಂಡಿಮೊಹಲ್ಲಾದ ಸದ್ಭಾವನ ವೇದಿಕೆ ವತಿಯಿಂದ ರಾಷ್ಟ್ರೀಯ ಭಾವೈಕ್ಯತೆ ಮತ್ತು ಶಾಂತಿ ಸಂದೇಶ ಸಭೆಯನ್ನು ಮುಂದಿನ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.

ಸಂಸ್ಥೆಯ ಕಚೇರಿಯಲ್ಲಿ ಖಲೀಲುರ್ ರಹಮಾನ್ ವಸೀಂ ಸಾಹೇಬ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಸಾಹಿತಿ ಬನ್ನೂರು ಕೆ.ರಾಜು, ಡಾ.ಮುನಿವೆಂಕಟಪ್ಪ, ನಾಗೇಗೌಡ, ನೂರ್ ಮೊಹಮ್ದ್ ಮರ್ಚೆಂಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಭಾರತ ಮಾತಾ ಕಟ್ಟಡ ಕಾರ್ಮಿಕ ಸಂಘ ರವಿಕುಮಾರ್, ಜನಾಬ್ ಶೇಖ್, ಅಸದುಲ್ಲಾ, ಸಾಧಿಕ್ ಪಾಷ, ಏಜಾಜ್ ಅಹ್ಮದ್ ಖಾನ್, ರಫೀವುಲ್ಲ ಮತ್ತಿತರು ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: