ಕರ್ನಾಟಕ

ರಾತ್ರಿ 9ರವರೆಗೂ ಕಾರ್ಯನಿರ್ವಹಿಸಲು ಬ್ಯಾಂಕ್‍ಗಳ ನಿರ್ಧಾರ..?

500 ಮತ್ತು 1000 ರು. ನೋಟುಗಳ ನಿಷೇಧದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲ ಬ್ಯಾಂಕ್‍ಗಳು ಸ್ವಯಂಪ್ರೇರಿತವಾಗಿ ರಾತ್ರಿ 9 ಗಂಟೆಯವರೆಗೆ ಕಾರ್ಯ ನಿರ್ವಹಿಸಲು ನಿರ್ಧರಿಸಿವೆ.

ನೋಟುಗಳ ನಿಷೇಧವಾದ ಬಳಿಕ ಗುರುವಾರದಂದು ಬ್ಯಾಂಕ್‍ಗಳು ಕಾರ್ಯಾರಂಭಿಸಿದ್ದು, ಪ್ರತಿ ಬ್ಯಾಂಕ್‍ನಲ್ಲೂ ದೊಡ್ಡ ದೊಡ್ಡ ಕ್ಯೂನಲ್ಲಿ ನಿಂತು ಜನರು ಹಣ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ಸಂಕಷ್ಟವನ್ನು ನಿವಾರಿಸಲು ಬ್ಯಾಂಕ್‍ ರಾತ್ರಿ 9ರವರೆಗೆ ಕಾರ್ಯ ನಿರ್ವಹಿಸಲು ನಿರ್ಧರಿಸಿವೆ ಎನ್ನಲಾಗಿದೆ.

ಆರ್‍ಬಿಐ ಬ್ಯಾಂಕ್‍ ಸಿಬ್ಬಂದಿಗೆ ಅನಗತ್ಯ ರಜೆಗಳನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದು, ಸಿಬ್ಬಂದಿಯ ರಜೆ ಮೊಟಕುಗೊಳಿಸಲಾಗಿದೆ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

Leave a Reply

comments

Related Articles

error: