
ಕರ್ನಾಟಕಪ್ರಮುಖ ಸುದ್ದಿ
ಹಿರಿಯ ವೈದ್ಯಾಧಿಕಾರಿಗಳ 1065 ಹುದ್ದೆ: ಮೂಲ ದಾಖಲೆಗಳ ಪರಿಶೀಲನೆ
ಬೆಂಗಳೂರು (ನ.14): ಕರ್ನಾಟಕ ಲೋಕಸೇವಾ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿನ ತಜ್ಞರು/ಹಿರಿಯ ವೈದ್ಯಾಧಿಕಾರಿಗಳ 1065 ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ನವೆಂಬರ್ 20 ಹಾಗೂ 21 ರಂದು ಬೆಳಿಗ್ಗೆ 9.30 ಗಂಟೆಗೆ ಮತ್ತು ಮಧ್ಯಾಹ್ನ 2.30 ಗಂಟೆಗೆ ಹಾಗೂ ನವೆಂಬರ್ 22 ರ ಬೆಳಿಗ್ಗೆ 9.30 ಗಂಟೆಗೆ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ನಡೆಸಲಿದೆ.
ಆರ್ಹ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ವೆಬ್ಸೈಟ್ “htp://kpsc.kar.nic.in” ರಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸೂಚನಾ ಪತ್ರಗಳನ್ನು ಆಯೋಗದ ಅಂತರ್ಜಾಲದಿಂದ ಅಪ್ಲಿಕೇಷನ್ ಐಡಿ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.
(ಎನ್ಬಿಎನ್)