ಮೈಸೂರು

ಮೈಸೂರು ಗ್ರಾಹಕ ಪರಿಷತ್ ಅಧ್ಯಯನಕ್ಕೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಸಿಗಲಿದೆ : ಡಿ.ರಂದೀಪ್

ಮೈಸೂರು,ನ.15:- ಮೈಸೂರು ಗ್ರಾಹಕರ ಪರಿಷತ್ ವತಿಯಿಂದ ನಡೆಯುವ ಮೈಸೂರಿನ ವಾಣಿಜ್ಯ ವಲಯದ ರಸ್ತೆ ಸಂಚಾರ ಸಮಸ್ಯೆಗಳ ಬಗ್ಗೆ ಅಧ್ಯಯನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.

ಇದೇವೇಳೆ ಮೈಸೂರು ಗ್ರಾಹಕ ಪರಿಷತ್ ನ ಆರ್ ಚಂದ್ರ ಶಂಕರ್ ಮಾತನಾಡಿ ನಗರದ ಸಂಚಾರದ  ವ್ಯವಸ್ಥೆ ಬಗ್ಗೆ ಮೈಸೂರು ಗ್ರಾಹಕ ಪರಿಷತ್ ಉದ್ದೇಶವಾದ ಒಂದು ಸಮಗ್ರ ಅಧ್ಯಯನ ನಡೆಸುತ್ತಿದ್ದು, ನಗರದ ವಾಣಿಜ್ಯ ಪ್ರದೇಶಗಳಲ್ಲಿ ರಸ್ತೆ ಸಂಚಾರದ ಬಗ್ಗೆ ತುರ್ತಾದ ಕ್ರಮ ಕೈಗೊಳ್ಳಲು ರಸ್ತೆಯ ಅಧ್ಯಯನ ಮಾಡಬೇಕಾಗುತ್ತದೆ. ರಸ್ತೆಯ ವಾಹನದಟ್ಟಣೆ, ಅಪಘಾತಗಳು ಇನ್ನಿತರ ಸಮಸ್ಯೆಗಳ ಬಗ್ಗೆ ಅಧ್ಯಯನದ ಅವಶ್ಯಕತೆ ಇದೆ,  ಆದ್ದರಿಂದ ಮೈಸೂರು ಗ್ರಾಹಕ ಪರಿಷತ್ ಇಂಥದ್ದೊಂದು ಸಮೀಕ್ಷೆಯನ್ನು ನಡೆಸಿ ರಸ್ತೆಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿಯನ್ನು ನೀಡುವ ಪ್ರಯತ್ನ ಮಾಡುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೈಸೂರು ವಾಣಿಜ್ಯ ವಲಯಗಳ ರಸ್ತೆಗಳ ಸಮಸ್ಯೆಗಳು ಮತ್ತು ಅಪಘಾತಗಳು ಹೆಚ್ಚುತ್ತಿದ್ದು ಇದಕ್ಕೆ ಕಾರಣ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿರುವುದು ಕಂಡುಬಂದಿದೆ. ಈ ಸಮಸ್ಯೆಗಳ ಕುರಿತಾದ ಒಂದು ಅಧ್ಯಯನದ ಅವಶ್ಯಕತೆ ಇದೆ. ಈ ಜವಾಬ್ದಾರಿಯನ್ನು ಮೈಸೂರು ಗ್ರಾಹಕ ಪರಿಷತ್ ನಿರ್ವಹಿಸುತ್ತಿರುವುದು ಸಂತೋಷದ ಸಂಗತಿ ಇವರ ಅಧ್ಯಯನಕ್ಕೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಸಿಗಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: