ಕರ್ನಾಟಕಕ್ರೀಡೆ

ಟೆಕ್ವಾಂಡೋ ಸ್ಪರ್ಧೆಯಲ್ಲಿ ಹೆಚ್.ವಿ.ಸಂಜನಾಗೆ ಚಿನ್ನದ ಪದಕ

ಹಾಸನ (ನ.15): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ವಿಭಾಗದ 3ನೇ ಸೆಮಿಸ್ಟರ್‍ನ ವಿದ್ಯಾರ್ಥಿನಿ ಕು.ಸಂಜನಾ ಹೆಚ್.ವಿ. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಟೆಕ್ವಾಂಡೋ ಸ್ಫರ್ಧೆಯಲ್ಲಿ (62 ಕೆ.ಜಿ. ಕೆಳವರ್ಗದ ವಿಭಾಗದಲ್ಲಿ) ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಶಂಕರ್ ಕೆ.ಸಿ., ಶ್ರೀ ನಾಗೇಶ, ಸಹಾಯಕ ನಿರ್ದೇಶಕರು (ದೈಹಿಕ ಶಿಕ್ಷಣ & ಕ್ರೀಡೆ) ಮತ್ತು ಸಿಬ್ಬಂದಿ ವರ್ಗದವರು ಕು.ಸಂಜನಾ ಹೆಚ್.ವಿ. ಅವರನ್ನು ಅಭಿನಂದಿಸಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: