ಮೈಸೂರು

ನ.16 ಮತ್ತು 17ರಂದು ಕೇಕ್ ಪ್ರದರ್ಶನ ಮತ್ತು ಮಾರಾಟ

ಮೈಸೂರು, ನ. 15 : ಸಾಲ್ವೆ ಮರಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ನ.16 ಮತ್ತು 17ರಂದು ವಿನೂತನ ಕೇಕ್ ಪ್ರದರ್ಶನ ಮತ್ತು ಮಾರಾಟ, ಕ್ರಿಸ್ಮಸ್ ಗೀತಾ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಪ್ರೊ.ಮಾಕ್ ತಿಳಿಸಿದರು.

ಬೆಂಗಳೂರು ಹೆದ್ದಾರಿಯಲ್ಲಿರುವ ಬನ್ನಿ ಮಂಟಪದ ದೀನರ ತಾಯಿ ಚರ್ಚ್ ಸಭಾಂಗಣದಲ್ಲಿ ಕೇಕ್ ಪ್ರದರ್ಶನ ಮತ್ತು ಮಾರಾಟ ಹಾಗೂ ಕ್ರಿಸ್ಮಸ್ ಸನ್ನುತಿ ಗೀತಾ ಗಾಯನ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ  ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಪಾಲ್ಗೊಂಡು ಸೇವೆ ನೀಡಬಹುದಾಗಿದ್ದು ಪಾಲ್ಗೊಳ್ಳಲು ಇಚ್ಛೆ ಇರುವವರು ಮೊ.ನಂ. 9739308263 ಅನ್ನು ಸಂಪರ್ಕಿಸಬಹುದು ಎಂದು ಬುಧವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್ ವತಿಯಿಂದ ಬಡವರ, ದೀನ ದಲಿತರ, ಮಹಿಳಾ ಸಬಲೀಕರಣಕ್ಕಾಗಿ ಉದ್ಯೋಗ ತರಬೇತಿ ನೀಡಲಾಗುತ್ತಿದೆ, ಇದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಸಹಾಯ ಮಾಡಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಪ್ರೊ.ಮೇರಿ, ರೋಸಲಿನ್ ನೋಯೆಲ್ , ಜಾನ್ ಬಾಸ್ಕೊ ಡೇವಿಡ್, ಅಶೋಕ್ ಹಾಗೂ ಸಲಹೆಗಾರ ಜೇಸ್ ಕ್ರಿಸ್ಟೋಫರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: