ಕರ್ನಾಟಕ

ಖಾಸಗಿ ವೈದ್ಯರುಗಳು ಆಸ್ಪತ್ರೆ ಬಂದ್ ರೋಗಿಗಳ ಪರದಾಟ

ರಾಜ್ಯ(ತುಮಕೂರು)ನ.15:- ಖಾಸಗಿ ವೈದ್ಯರುಗಳು ಆಸ್ಪತ್ರೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ರೋಗಿಗಳ ಪರದಾಟ ಹೇಳ ತೀರದಾಗಿದೆ.

ಪ್ರತಿ ಆಸ್ಪತ್ರೆಯ ಮುಂದೆ ರೋಗಿಗಳು ಬಂದು ಬೀಗ ಹಾಕಿರುವ ಆಸ್ಪತ್ರೆ ಬಾಗಿಲನ್ನು ನೋಡಿ ನಿರಾಶರಾಗಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಸ್ಪತ್ರೆಗಳಿಗೆ ರೋಗಿಗಳ ಸಂಖ್ಯೆ ಹೆಚ್ಚಳವಿರುತ್ತಿದ್ದು, ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಕಾರಣ ಸರ್ಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿದ್ದರಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು ಬಿಡುವಿಲ್ಲದೆ ಕೆಲಸ ಮಾಡಬೇಕಾಗಿತ್ತು. ಪಟ್ಟಣದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿ ‘ಬೆಳಗಾಂ ಚಲೋ’ಗೆ ಹೋಗಿದ್ದಾರೆ ಎಂಬ ಬರಹ ಬಾಗಿಲಿಗೆ ಅಂಟಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: