ಮೈಸೂರು

ಬ್ಲಾಗ್ ನಲ್ಲಿ ಬರವಣಿಗೆ ಆರಂಭಿಸಿದ ರಾಜವಂಶಸ್ಥ ಯದುವೀರ್

ಮೈಸೂರು,ನ.15-ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಬ್ಲಾಗ್ ಮೂಲಕ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ.

ವೈಯಕ್ತಿಕ ವೆಬ್ ಸೈಟ್ ನಲ್ಲಿ ಭೇರುಂಢ ಹೆಸರಿನಲ್ಲಿ ಮೊದಲ ಸುದ್ದಿಪತ್ರವನ್ನು ಯದುವೀರ್ ಪ್ರಕಟಿಸಿದ್ದಾರೆ. ದಸರಾ ವಿಶೇಷಾಂಕದ ಸುದ್ದಿಪತ್ರವನ್ನು ಉದ್ಘಾಟನೆಯ ಸುದ್ದಿ ಪತ್ರ (ಇನಾಗರಲ್ ನ್ಯೂಸ್ ಲೇಟರ್) ಎಂಬ ಹೆಸರಿನಲ್ಲಿ ಮೊದಲ ಪತ್ರ ಬರೆದು ಪ್ರಕಟಿಸಿದ್ದಾರೆ.

ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ. ರಾಜಮನೆತನ ಕಾರ್ಯಕ್ರಮಗಳಲ್ಲಿ ಸೇವೆಯು ಒಂದು ಭಾಗ. ನಾವು ನೀವು ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟ. ನನ್ನ ಆಲೋಚನೆಗಳನ್ನ ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

 

 

 

 

Leave a Reply

comments

Related Articles

error: