ಮೈಸೂರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪದವಿ ಪರೀಕ್ಷೆ ಮುಂದೂಡಲು ವಿವಿಗೆ ಒತ್ತಾಯ

ಮೈಸೂರು, ನ. 15 : ನಗರದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನ.24 ರಿಂದ 26ರವರೆಗೆ ನಡೆಸಲಿರುವ ಪರೀಕ್ಷೆಗಳನ್ನು ಮೈಸೂರು ವಿವಿ ಮುಂದೂಡಬೇಕೆಂದು ಬಹುಜನ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

ಸಮ್ಮೇಳನದ ಸಮಯದಲ್ಲಿಯೇ ಪದವಿ ಪರೀಕ್ಷೆಗಳು ನಡೆಸಲು ಹೊರಟಿರುವ ವಿವಿಯ ನೀತಿಯನ್ನು ವಿಷಾಧಿಸಿರುವ ಸಂಘವು, ಮೈಸೂರು ವಿಶ್ವವಿದ್ಯಾನಿಲಯವು ಸಮ್ಮೇಳನದ ಭಾಗವಾಗದೆ ಹೊರ ಉಳಿದಿರುವುದು ನೋವಿನ ಸಂಗತಿಯೆಂದು ಖಮಡಿಸಿದೆ.

ಕನ್ನಡ ನಾಡುನುಡಿ.  ಸಂಸ್ಕೃತಿ ಮತ್ತು ಭಾಷೆಯ ಬಗೆಗೆ ಇಂದಿನ ಪೀಳಿಗೆಗೆ ಆಸಕ್ತಿ ಕಡಿಮೆಯಾಗುತ್ತಿದ್ದು ಈ ಹೊತ್ತಿನಲ್ಲಿ ವಿವಿಯೂ ಕನ್ನಡ ಸಾಹಿತ್ಯದ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ನ.24 ರಿಂದ 26ರವರೆಗೆ ತನ್ನೆಲ್ಲಾ ಪರೀಕ್ಷೆಗಳನ್ನು ಮುಂದೂಡಿ, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದು ನಗರ ಸಂಯೋಜಕ ಎಚ್.ಎಸ್.ಗಣೇಶ್ ಮೂರ್ತಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: