ಸುದ್ದಿ ಸಂಕ್ಷಿಪ್ತ
ಗೊಮ್ಮಟೇಶ್ವರ ಮಸ್ತಕಾಭಿಷೇಕ ಡಿ.3.
ಮೈಸೂರು, ನ. 15 : ಶ್ರೀಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿಯಿಂದ ಹುಣಸೂರಿನ ಗೋಮ್ಮಟಗಿರಿ ಕ್ಷೇತ್ರದ ಶ್ರೀಗೊಮ್ಮಟೇಶ್ವರ ಸ್ವಾಮಿಗೆ 68ನೇ ವರ್ಷದ ಮಸ್ತಕಾಭಿಷೇಕವನ್ನು ಡಿ.3ರ ಮಧ್ಯಾಹ್ನ 12 ಗಂಟೆಗೆ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಭಾರೀ ಮತ್ತು ಮಾಧ್ಯಮ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಂಸಧಿಯ ಕಾರ್ಯದರ್ಶಿ ಹೆಚ್.ಪಿ.ಮಂಜುನಾಥ್ ಅಧ್ಯಕ್ಷತೆ ವಹಿಸುವರು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಕೋರಿದ್ದಾರೆ. (ಕೆ.ಎಂ.ಆರ್)