ಸುದ್ದಿ ಸಂಕ್ಷಿಪ್ತ

ಡಿ.ಬನುಮಯ್ಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನ.16

ಮೈಸೂರು, ನ. 15 : ಡಿ.ಬನುಮಯ್ಯ ಬಾಲಕಿಯರ ಶಾಲೆ, ವೆಂಕಟಗಿರಿ ಪ್ರಕಾಶನ ಸಂಯುಕ್ತವಾಗಿ ಕನ್ನಡ ರಾಜ್ಯೋತ್ಸವ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿ ಸಂಭ್ರಮವನ್ನು ನ.16ರ ಬೆಳಗ್ಗೆ 11 ಗಂಟೆಗೆ ಶಾಲೆಯಲ್ಲಿ ಆಯೋಜಿಸಿದೆ.

ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ.ನೀ.ಗಿರಿಗೌಡ ಉದ್ಘಾಟಿಸುವರು, ಮುಖ್ಯ ಶಿಕ್ಷಕ ಹೆಚ್.ಎಸ್.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಕೆ.ರಘುರಾಂ, ಕವಿಯತ್ರಿ ಡಾ.ಎ.ಪುಷ್ಪ ಐಯ್ಯಂಗಾರ್, ಎ.ವೈದೇಹಿ, ಕೆ.ಎನ್.ಜಯರಾಮೇಗೌಡ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: