ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರಲ್ಲಿ ರಾಜ್ಯಮಟ್ಟದ ಮಹಿಳಾ ವಿಜ್ಞಾನ ಸಮಾವೇಶ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾವಿಪ), ಮೈಸೂರಿನ ಕರಾವಿಪ ಜಿಲ್ಲಾ ಸಮಿತಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಜಂಟಿ ಸಹಯೋಗದೊಂದಿಗೆ ರಾಜ್ಯ ಮಟ್ಟದ ಮಹಿಳಾ ವಿಜ್ಞಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸಮಾವೇಶದ ಕಾರ್ಯಕ್ರಮಗಳು ನವೆಂಬರ್ 27-26 ರಂದು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ “ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಸಭಾಂಗಣ”ದಲ್ಲಿ ನಡೆಯಲಿವೆ. ಸಮಾವೇಶದಲ್ಲಿ ಪ್ರತಿ ಜಿಲ್ಲೆಯಿಂದ ತಲಾ ಇಬ್ಬರಂತೆ ಆಯ್ದ ಮಹಿಳಾ ಪ್ರತಿನಿಧಿಗಳು, ಸ್ತ್ರೀಶಕ್ತಿ ಸಂಘಟನೆಗಳ ಕಾರ್ಯಕರ್ತರು, ಶಿಕ್ಷಕಿಯರು, ಉಪನ್ಯಾಸಕಿಯರು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಆಯ್ದ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.

ವಿವಿಧ ವಿಚಾರಗೋಷ್ಠಿಗಳು: ಇದಲ್ಲದೆ ಸಮಾವೇಶದ ಅಂಗವಾಗಿ ವಿವಿಧ ವಿಚಾರಗೋಷ್ಠಿಗಳು ನಡೆಯಲಿದ್ದು, ಮಹಿಳಾ ವಿಜ್ಞಾನಿಗಳು, ವಿಜ್ಞಾನ ಸಂವಹನಕಾರರು, ಮಾಧ್ಯಮ ತಜ್ಞರು ಹಾಗೂ ಶಿಕ್ಷಣ ತಜ್ಞರು ಸಮಾವೇಶದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ರಾಜ್ಯದ ಆಸಕ್ತ ಮಹಿಳಾ ಪ್ರತಿನಿಧಿಗಳು ಉದ್ದೇಶಿತ ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ. ತಮ್ಮ ಸ್ವ-ವಿವರಗಳೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಚೇರಿಯನ್ನು ಸಂಪರ್ಕಿಸಬಹುದು.

ವಿಳಾಸ: # 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಅಥವಾ ದೂರವಾಣಿ ಸಂಖ್ಯೆ 080-26718939 ಮೂಲಕ ಸಂಪರ್ಕಿಸಬಹುದು. ಸಮಾವೇಶದಲ್ಲಿ ಭಾಗವಹಿಸುವ ಮಹಿಳಾ ಪ್ರತಿನಿಧಿಗೆಳಿಗೆ ಯಾವುದೇ ಪ್ರಯಾಣ ವೆಚ್ಚ ನೀಡಲಾಗುವುದಿಲ್ಲ. ಎರಡೂ ದಿನಗಳಂದು ಊಟೋಪಚಾರ ವ್ಯವಸ್ಥೆ ಸೇರಿದಂತೆ ಮೊದಲು ಬಂದವರಿಗೆ ಆದ್ಯತೆ. ಗರಿಷ್ಠ 20 ಜನರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು.

ಸಂಸ್ಥೆಯ ಕುರಿತು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾವಿಪ) ರಾಜ್ಯ ಮಟ್ಟದ ಸ್ವಾಯತ್ತ ಸಂಸ್ಥೆಯಾಗಿದ್ದು, ಕಳೆದ ನಾಲ್ಕು ದಶಕಗಳಿಂದ ರಾಜ್ಯದಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಾರ ಹಾಗೂ ಪ್ರಸಾರದಲ್ಲಿ ನಿರತವಾಗಿದೆ. ಖ್ಯಾತ ಶಿಕ್ಷಣ ತಜ್ಞ ಹಾಗೂ ವಿಚಾರವಾದಿ ಡಾ. ಎಚ್. ನರಸಿಂಹಯ್ಯನವರು ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದು ಪ್ರಸ್ತುತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ದೇಶದ ಪ್ರತಿಷ್ಠಿತ ವಿಜ್ಞಾನಿ ಭಾರತರತ್ನ ಪ್ರೊ|| ಸಿ.ಎನ್.ಅರ್. ರಾವ್ ಪರಿಷತ್ತಿನ ಮಹಾಪೋಷಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ವರ್ಷವಿಡೀ ವಿಜ್ಞಾನ-ತಂತ್ರಜ್ಞಾನದ ಪ್ರಚಾರ ಹಾಗೂ ಪ್ರಸಾರದ ಅಂಗವಾಗಿ ಹಲವಾರು ಯೋಜನೆ, ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ. ಪರಿಷತ್ತಿನ ಪ್ರಮುಖ ಯೋಜನೆಯಾಗಿರುವ “ಮಹಿಳೆ ಮತ್ತು ವಿಜ್ಞಾನ ಯೋಜನೆಯಡಿಯಲ್ಲಿ ಪ್ರತಿ ವರ್ಷವೂ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

Leave a Reply

comments

Related Articles

error: