ಮೈಸೂರು

ಮೇಯರ್‍ಗಾದಿಗೆ ಮೀಸಲು ಪ್ರಕಟ: ಹೆಚ್ಚುತ್ತಿದೆ ಆಕ್ಷಾಂಕಿಗಳ ಪಟ್ಟಿ

ಹಾಲಿ ಮೇಯರ್ ಆಗಿರುವ ಬಿ.ಎಲ್. ಭೈರಪ್ಪ ಅವರ ಅವಧಿ ನ.13ಕ್ಕೆ ಮುಕ್ತಾಯಗೊಳ್ಳಲಿದ್ದು, ಮೈಸೂರು ನಗರಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಮೀಸಲು ಅಧಿಸೂಚನೆ ಹೊರಡಿಸಿದ 7 ದಿನಗಳಲ್ಲಿ ನೂತನ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆ ನಡೆಯಬೇಕಿದೆ. ಮೀಸಲು ಸಾಮಾನ್ಯ ವರ್ಗಕ್ಕೆ ಸಿಕ್ಕಿದ್ದರೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಆದರೂ, ಯಾವ ಪಕ್ಷಕ್ಕೂ ಬಹುಮತ ಇಲ್ಲದಿರುವುದರಿಂದ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಜೆಡಿಎಸ್, ಬಿಜೆಪಿ ಹೊಂದಾಣಿಕೆಯಲ್ಲಿ ಈ ಅವಧಿಯಲ್ಲಿ ಪಕ್ಷೇತರರಾಗಿದ್ದ ಬಿ.ಎಲ್. ಭೈರಪ್ಪ ಅವರು ಮೇಯರ್ ಆಗಿದ್ದರು.

Leave a Reply

comments

Related Articles

error: