ಮೈಸೂರು

ಮಂತ್ರ ಮಾಂಗಲ್ಯದ ಮೂಲಕ ವಿವಾಹ ಬಂಧನಕ್ಕೊಳಗಾದ ಪವನ್

ಮೈಸೂರು,ನ.16:- ನಗರದಲ್ಲಿ ನಿನ್ನೆ ಅಪರೂಪದ ಮದುವೆಯೊಂದು ನಡೆದಿದೆ. ಅಮೆರಿಕಾದಿಂದ ನವ ಜೋಡಿ ಬಂದು ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ.

ಅಮೇರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಪವನ್ ಕುಮಾರ್ ಎಂಬ ವರನೋರ್ವ ಮೈಸೂರಿನ ರಂಜಿತ ಎಂಬ ವಧುವನ್ನು ಬುಧವಾರ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ. ಅಮೆರಿಕಾದಲ್ಲಿ ಪವನ್ ನೆಲೆಸಿ ಸಮಾಜದಲ್ಲಿ ಮೂಢ ನಂಬಿಕೆ ಕಂದಾಚಾರ ವಿರೋಧಿಸುತ್ತಿದ್ದರು ಹೀಗಾಗಿ ರಾಹುಕಾಲ, ಗುಳಿಕಾಲ, ಜಾತಕ ನೋಡದೆ, ದಿನ, ಕ್ಷಣ ನೋಡದೆ ಇವತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 33 ವರ್ಷಗಳ ಹಿಂದೆ ಪವನ್ ಕುಮಾರ್ ಪೋಷಕರು ಕೂಡ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿದ್ದರು. ಅಂದು ಅವರು ಶಾಲೆಯೊಂದರ ಜಗಲಿ ಮೇಲೆ ಮದುವೆಯಾಗಿದ್ದರು. ಇಂದು ಇದೇ ರೀತಿ ಪವನ್ ಕೂಡ ಮೈಸೂರಿನ ಸಾರಾ ಸಭಾಂಗಣದಲ್ಲಿ ಆಧುನಿಕತೆಗೆ ತಕ್ಕಂತೆ ಮದುವೆಯಾಗಿದ್ದಾರೆ. ಯಾವುದೇ ರೀತಿಯ ಸಂಪ್ರದಾಯವನ್ನು ಪಾಲಿಸಲಿಲ್ಲ. ಮದುವೆ ಕುರಿತು ತಮ್ಮ ಕನಸನ್ನು ಬಿಚ್ಚಿಟ್ಟ ಪವನ್, ತಮ್ಮ 33 ವರ್ಷ ಹಿಂದೆ ಪೋಷಕರು ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿ ಸಾರ್ಥಕ ಜೀವನ ನಡೆಸಿದ್ದಾರೆ. ಅವರೇ ನನಗೆ ಪ್ರೇರಣೆ ಅವರ ಹಾದಿಯಲ್ಲೇ ನಡೆಯುತ್ತಿದ್ದೇನೆ. ಹಲವರು ಈ ಕುರಿತು ಪ್ರಶ್ನೆ ಮಾಡುತ್ತಾರೆ ಆದರೆ ನನಗೆ ಇಂತಹ ಸಂಪ್ರದಾಯದಲ್ಲಿ ನಂಬಿಕೆ ಇಲ್ಲ ಎಂದು ತಿಳಿಸಿದರು. ಮಗನ ಮದುವೆ ಕುರಿತು ಹರ್ಷ ವ್ಯಕ್ತಪಡಿಸಿದ ಪವನ್ ಪೋಷಕರು ಸಮಾಜದಲ್ಲಿ ಇಂತಹ ಆಚರಣೆಗಳು ಹೆಚ್ಚಾಗಿ ನಡೆಯಬೇಕು, ಅದ್ಧೂರಿ ಮದುವೆಗಳಿಗೆ ವೆಚ್ಚ ಮಾಡುವ ಹಣವನ್ನು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಬೇಕು ಎಂದು ಅಭಿಪ್ರಾಯಪಟ್ಟರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: