ಪ್ರಮುಖ ಸುದ್ದಿಮೈಸೂರು

ಸಚಿವ ತನ್ವೀರ್ ಸೇಠ್‍ರನ್ನು ತಕ್ಷಣವೇ ವಜಾಗೊಳಿಸಿ: ಮಾರುತಿರಾವ್ ಪವಾರ್

ಸರ್ಕಾರವೇ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ರಾಯಚೂರಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ನೀಲಿ ಚಿತ್ರ ವೀಕ್ಷಿಸಿರುವುದರಿಂದ ಕರ್ನಾಟಕ ರಾಜ್ಯದ ಸಂಸ್ಕೃತಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದ ತತ್ವಗಳನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸಚಿವರ ರಾಜೀನಾಮೆ ಪಡೆದು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎನ್.ಆರ್.ಕ್ಷೇತ್ರದ ಮಾಜಿ ಶಾಸಕ ಮಾರುತಿರಾವ್ ಪವಾರ್ ಆಗ್ರಹಿಸಿದರು.

ಅವರು, ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆಡಳಿತ ಪಕ್ಷದ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಅವರ ನಡುವಳಿಕೆ ಜಗತ್ ಜಾಹೀರವಾಗಿದೆ. ಸಾಮಾಜಿಕ ಜವಾಬ್ದಾರಿಯಿಲ್ಲದೇ ಮಾಧ್ಯಮಗಳಿಗೆ ಮೂರು ತಿಂಗಳಿನಿಂದ ಮನೆಗೆ ಹೋಗಿಲ್ಲ ಎಂದು ಪ್ರತಿಕ್ರಿಯಿಸಿರುವ ಅರ್ಥವೇನು? ಎಂದು ಕಿಡಿಕಾರಿ,  ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವರೇ ಅಯೋಗ್ಯರಾದರೆ  ಮಕ್ಕಳಿಗೆ ಯಾವ ರೀತಿ ನೀತಿ ಪಾಠ ಹೇಳಲು ಸಾಧ್ಯ. ಇವರ ವರ್ತನೆಯೂ ನಾಚಿಕೆಗೇಡಿನ ವಿಷಯವಾಗಿದೆ.

ನೀಲಿ ಚಿತ್ರದ ನಿರ್ಮಾಪಕರಾಗಲಿ : ಸಚಿವ ತನ್ವೀರ್ ಸೇಠ್ ಶಿಕ್ಷಣ ಸಚಿವರಾಗಿ ಮುಂದುವರೆಯಲೂ ಆಯೋಗ್ಯರಾಗಿದ್ದು ನೀಲಿ ಚಿತ್ರದ ನಿರ್ಮಾಪಕರಾಗಲಿ, ಜವಾಬ್ದಾರಿ ಸ್ಥಾನದಲ್ಲಿರುವ ಸಭೆಯ ಗೌರವನ್ನು ಕಾಪಾಡದೇ ಅಶ್ಲೀಲ ವಿಡಿಯೋವನ್ನು ನೋಡಿ ಮುಜುಗರವನ್ನುಂಟು ಮಾಡಿದ್ದಾರೆ. ಸಭ್ಯರು, ಯೋಗ್ಯರಾದ ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಇಂತಹ ಅಯೋಗ್ಯರಿಗೆ ಸ್ಥಾನ ನೀಡಿದ್ದು ರಾಜ್ಯವೇ ತಲೆತಗ್ಗಿಸುವಂತಾಗಿದೆ.  ತನ್ವೀರ್ ಸೇಠ್ ಸ್ವತಂತ್ರವಾಗಿ ಗೆದ್ದವರಲ್ಲ, ಅಜಿತ್ ಸೇಠ್ ಕೃಪಾಕಟಾಕ್ಷದಿಂದ ಶಾಸಕರಾದವರು.

ಧರಣಿ ಸತ್ಯಾಗ್ರಹ: ಇಂತಹ ನೀತಿಗೆಟ್ಟ ಶಿಕ್ಷಣ ಮಂತ್ರಿ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಆಗ್ರಹಿಸಿ ಸರ್ಕಾರವೂ ಸಚಿವರ ರಾಜೀನಾಮೆ ಪಡೆಯುವವರೆಗೂ ಗಾಂಧಿಚೌಕದಲ್ಲಿ ಬಿಜೆಪಿಯಿಂದ ಪ್ರತಿನಿತ್ಯ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಚಿವರ ಬಾಲಿಶ ನಡುವಳಿಕೆ ಅನಾವರಣವಾಗಿದೆ. ಯಾವ ಕಳ್ಳನ್ನು ತಾನು ಕಳ್ಳನೆಂದು ಹೇಳಿಕೊಳ್ಳುವುದಿಲ್ಲ. ಅದರಂತೆ ನಾನು ನೋಡಿಲ್ಲವೆಂದು ಸಚಿವರನ್ನು ಸುಳ್ಳಾಡುತ್ತಿದ್ದಾರೆ. ಪ್ರಕರಣವನ್ನು ತನಿಖೆಗೊಳಪಡಿಸಲಾಗಿದೆ ಎಂದು ಸರ್ಕಾರ ಕೈತೊಳೆದುಕೊಳ್ಳಬಾರದು. ಅರೋಪಗಳು ಅಧಿಕಾರ ಸ್ಥಾನದಲ್ಲಿದ್ದರೆ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಆದ್ದರಿಂದ ತಕ್ಷಣವೇ ಸಚಿವರನ್ನು ವಜಾಗೊಳಿಸಿ ಸರ್ಕಾರ ಆದೇಶಹೊರಡಿಸಬೇಕು ಎಂದು ಆಗ್ರಹಿಸಿದರು.

ಎರಡು ಬಾರಿ ಸಚಿವರಾದರೂ ಬಡವರಿಗೆ ಆಶ್ರಯ ಮನೆಗಳನ್ನು ವಿತರಿಸಿಲ್ಲ, ಸಚಿವರ ಕಾರ್ಯವೈಖರಿ ಬೇಜವ್ದಾರಿಯುತವಾಗಿದೆ.  ಇವರ ಬಳಿ ನಾಚಿಕೆ ಇಲ್ಲದೇ ಹೆಣ್ಣು ಮಕ್ಕಳು ಹಾಗೂ ಕ್ಷೇತ್ರದ ಮಹಿಳೆಯರು ತಮ್ಮ ಕಷ್ಟಗಳನ್ನು ಯಾವ ರೀತಿ ಹೇಳಬೇಕು ನೀವೇ ಹೇಳಿ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಬಿಜೆಪಿ ಸಚಿವರು ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದ  ಬಗ್ಗೆ ಗಮನಕ್ಕೆ ಬಂದಾಕ್ಷಣ ಅವರ ರಾಜೀನಾಮೆ ಪಡೆದಿತ್ತು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಮಧುಮಹದೇವಪ್ರಸಾದ್, ಉಪಾಧ್ಯಕ್ಷ ಬಸವರಾಜು,ಎನ್.ಆರ್ ಕ್ಷೇತ್ರದ ಸ್ಲಂ ಮೋರ್ಚಾ ಆಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಕಾರಿಣಿ ಸದಸ್ಯ ಆನಂದ್ ಹಾಗೂ ಅರ್ಜುನ್ ಉಪಸ್ಥಿತರಿದ್ದರು.

Leave a Reply

comments

Related Articles

error: