ಮೈಸೂರು

ನೋಟು ಬದಲಾವಣೆಗಾಗಿ ಬ್ಯಾಂಕುಗಳಿಗೆ ಮುಗಿಬಿದ್ದ ಟಿಬೆಟಿಯನ್ಸ್

ಬೈಲಕುಪ್ಪೆ: ಕೇಂದ್ರ ಸರಕಾರ 500 ಮತ್ತು 1000 ರು. ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿ ಬ್ಯಾಂಕುಗಳಲ್ಲಿ ಅವುಗಳನ್ನು ಬದಲಾಯಿಸುವುದಕ್ಕೆ ಅವಕಾಶ ನೀಡಿದ್ದರಿಂದ ಬೈಲಕುಪ್ಪೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳಲ್ಲಿ ಗ್ರಾಹಕರು ಅದರಲ್ಲೂ ಟಿಬೆಟನ್ ನಿರಾಶ್ರಿತರು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂತು.

ಶುಕ್ರವಾರ ಬೆಳಗ್ಗೆಯಿಂದಲೆ ನೂರಾರು ಗ್ರಾಹಕರು ಇಲ್ಲಿನ ಬ್ಯಾಂಕಿನಲ್ಲಿ ಸರದಿ ಸಾಲಿನಲ್ಲಿ ನಿಂತು 500 ಮತ್ತು 1000 ರು.ಗಳ ಮುಖಬೆಲೆಯ ನಗದು ಬದಲಾಯಿಸಲು ಮುಗಿಬೀಳುತ್ತಿದ್ದರು. ಆದರೆ ಮೂರು ದಿನ ಕಳೆದರೂ ಗ್ರಾಹಕರಿಗೆ ಕೇವಲ 100 ರು.ಗಳ ಬಂಡಲ್‌ಗಳನ್ನು ಮಾತ್ರ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ನೀಡುತ್ತಿದ್ದರು.

2000 ಮುಖಬೆಲೆಯ ಹೊಸ ನೋಟುಗಳ ಕಾತರದಲ್ಲಿದ್ದ ಗ್ರಾಹಕರಿಗೆ ನಿರಾಸೆಯಾಯಿತು. ಬೈಲಕುಪ್ಪೆಯ ಎಸ್‌ಬಿಎಂ ಬ್ಯಾಂಕ್‌ನಲ್ಲಿ ವಿಶೇಷವಾಗಿ ವೃದ್ಧರಿಗೆ ಬ್ಯಾಂಕ್‌ನ ವ್ಯವಸ್ಥಾಪಕ ಸಿತೇಶ್ ಕುಮಾರ್ ಮೈಕ್ ಮುಖಾಂತರ ಮಾತನಾಡಿ ಹಿಂದಿ, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮಾಹಿತಿ ನೀಡಿದರು. ಗ್ರಾಹಕರು ನೂಕುನುಗ್ಗಲು ಆರಂಭಿಸಿದಾಗ ಬೈಲಕುಪ್ಪೆ ಪೊಲೀಸ್ ಸಿಬ್ಬಂದಿ ಆಗಮಿಸಿ ಗ್ರಾಹಕರಿಗೆ ಸರದಿ ಸಾಲಿನಲ್ಲಿ ಆಗಮಿಸುವಂತೆ ಹೇಳಿ ಕರ್ತವ್ಯ ನಿರ್ವಹಿಸಿದರು.

Leave a Reply

comments

Related Articles

error: