ಪ್ರಮುಖ ಸುದ್ದಿಮೈಸೂರು

ಮಶಿನ್ ಗೆ ಸಿಲುಕಿ ವ್ಯಕ್ತಿ ಸಾವು

ಮೈಸೂರು,ನ.16:- ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೋರ್ವರು ಮಶಿನ್ ಗೆ ಸಿಲುಕಿ ಸಾವನ್ನಪ್ಪಿದ ಘಟನೆ ದೇಶದಲ್ಲಿಯೇ ಪ್ರಖ್ಯಾತಿ ಹೊಂದಿರುವ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಕೆ ಟಯರ್ ಫ್ಯಾಕ್ಟರಿಯಲ್ಲಿ ನಡೆದಿದೆ.

ಈ ರೀತಿ ದುರ್ಘಟನೆಗೆ ಒಳಗಾಗಿ ಸಾವನ್ನಪ್ಪಿದವರನ್ನು ನಗರದ ಸುಣ್ಣದ ಕೇರಿ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಅವರು ಗುರುವಾರ ಬೆಳಿಗ್ಗೆ ಎಂದಿನಂತೆ ಕಾರ್ಯನಿರ್ವಹಿಸಲು ಮಶಿನ್ ಆನ್ ಮಾಡಲು ತೆರಳಿದಾಗ ಮಶಿನ್ ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಆಗಮಿಸಿ ಪರಿಶಿಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಶದಲ್ಲಿಯೇ ಪ್ರಸಿದ್ಧವಾಗಿರುವ ಟಯರ್ ಕಂಪನಿಯಲ್ಲಿಯೇ ಕಾರ್ಮಿಕರ ಸುರಕ್ಷತೆಯ ಕ್ರಮ ಕೈಗೊಂಡಿಲ್ಲ ಎಂತಾದರೆ ಇನ್ನು ಚಿಕ್ಕಪುಟ್ಟ ಕಾರ್ಖಾನೆಗಳ ಕಾರ್ಮಿಕರ ಗತಿಯೇನು ಎಂಬ ಮಾತುಗಳು ಕೇಳಿ ಬಂದಿವೆ. ಮಶಿನ್ ನೊಳಗೆ ಸಿಲುಕಿದ ಕಾರ್ಮಿಕನ ಶರೀರವನ್ನು ಮಶಿನ್ ಬಿಚ್ಚಿ ತೆಗೆಯಲು ಸಾಧ್ಯವಿಲ್ಲ, ತುಂಡರಿಸಿ ತೆಗೆಯಲಾಗುವುದು  ಎಂದು ಕಾರ್ಖಾನೆಯವರು ತಿಳಿಸಿದ್ದು, ಮನೆಯವರು ಇದು ಸರಿಯಲ್ಲ  ನಮಗೆ ಅವನಿರೋ ಸ್ಥಿತಿಯಲ್ಲೇ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: